HEALTH TIPS

ಭಾರತದೊಂದಿಗೆ ಸಡಿಲ ಸಂಬಂಧ: ವೀಸಾ ತಿರಸ್ಕಾರಕ್ಕೆ US ನೀಡಿದ ಕಾರಣಕ್ಕೆ CEO ಕಳವಳ

ಗುರುಗ್ರಾಮ: ಭಾರತದೊಂದಿಗೆ ಸಡಿಲಗೊಂಡ ಸಂಬಂಧವೇ ವೀಸಾ ಅರ್ಜಿ ತಿರಸ್ಕರಿಸಲು ಕಾರಣ ಎಂದು ಅಮೆರಿಕ ರಾಯಭಾರ ಕಚೇರಿ ಹೇಳಿರುವುದನ್ನು ಹಂಚಿಕೊಂಡಿರುವ ಗುರುಗ್ರಾಮ ಮೂಲದ ಖಾಸಗಿ ಕಂಪನಿಯ ಸಿಇಒ ಕಳವಳ ವ್ಯಕ್ತಪಡಿಸಿದ್ದಾರೆ.

ಜಸ್ವೀರ್ ಸಿಂಗ್ ಎಂಬುವವರು ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಷಯ ಹಂಚಿಕೊಂಡಿದ್ದಾರೆ.

ಜಸ್ವೀರ್ ಅವರು ಒಂದು ಕಂಪನಿ ನಡೆಸುತ್ತಿದ್ದಾರೆ. 'ಕಳೆದ 13 ವರ್ಷಗಳಿಂದ ಕಂಪನಿ ನಡೆಸುತ್ತಾ ಸ್ಥಳೀಯರಿಗೆ ಉದ್ಯೋಗ ನೀಡುತ್ತಾ, ದೇಶಕ್ಕೆ ತೆರಿಗೆ ಕಟ್ಟುತ್ತಿದ್ದೇನೆ. ಆದರೆ ಇವು ಯಾವುವೂ ನಾನು ಭಾರತಕ್ಕೆ ಮರಳಲು ಅಗತ್ಯವಿರುವ ದಾಖಲೆಗಳಲ್ಲ' ಎಂದು ಬರೆದುಕೊಂಡಿದ್ದಾರೆ.

'ನಿಮ್ಮ ತರ್ಕದಂತೆ ನೀವು ಅನುಸರಿಸುತ್ತಿರುವ ಕ್ರಮಗಳಿಗಿಂತಲೂ ನನಗೆ ಭಾರತದೊಂದಿಗಿನ ಬದ್ಧತೆ ದೊಡ್ಡದು. ಒಂದೊಮ್ಮೆ ಇದುವೇ ನಿಮ್ಮ ಕಾರ್ಯವೈಖರಿಯಾದರೆ, ನಿಮ್ಮ ಉದ್ದೇಶದ ವಾಗ್ದಾನವನ್ನು ನೀವು ಮುರಿದಿದ್ದೀರಿ ಅಥವಾ ನಿಮ್ಮ ಕಾರ್ಯವಿಧಾನದಲ್ಲಿ ಗಂಭೀರ ಪರಿಶೀಲನೆ ಅಗತ್ಯವಿದೆ ಎಂದೇ ಅರ್ಥ. ನವದೆಹಲಿಯಲ್ಲಿರುವ ನಿಮ್ಮ ರಾಯಭಾರ ಕಚೇರಿಯ ತಂಡಕ್ಕೆ ಇನ್ನಷ್ಟು ಮನವರಿಕೆಯಾಗುವಂತೆ ತಿಳಿಹೇಳಿ' ಎಂದು ಅಮೆರಿಕ ರಾಯಭಾರ ಕಚೇರಿ ತಂಡಕ್ಕೆ ಸಲಹೆ ನೀಡಿದ್ದಾರೆ.

'ನನ್ನೊಬ್ಬರು ಸ್ನೇಹಿತರು ಮತ್ತೊಂದು ಸಲಹೆಯನ್ನು ನೀಡಿದ್ದಾರೆ. ರಾಯಭಾರ ಕಚೇರಿಯವರು ಸಾಮಾಜಿಕ ಮಾಧ್ಯಮವನ್ನೂ ಪರಿಶೀಲಿಸುತ್ತಿದ್ದಾರೆ. ಹೀಗಾಗಿ ಮುಂದಿನ ಬಾರಿ ಅರ್ಜಿ ಸಲ್ಲಿಸುವ ಮುನ್ನ ಅಮೆರಿಕ ಮತ್ತು ಅನಿವಾಸಿ ಭಾರತೀಯರ ಕುರಿತ ಯಾವುದಾದರೂ ವಿಷಯವನ್ನು ಹಂಚಿಕೊಂಡಿದ್ದಲ್ಲಿ ಅವುಗಳನ್ನು ಅಳಿಸಿಹಾಕಬೇಕು. ಹಾಗಿದ್ದರೆ ಮಾತ್ರ, ತ್ವರಿತವಾಗಿ ವೀಸಾ ಮಂಜೂರಾಗುತ್ತದೆ ಎಂದಿದ್ದರು' ಎಂದು ಜಸ್ವೀರ್ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್‌ ಜತೆಗೆ ಜಸ್ವೀರ್ ಅವರು ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಅಧಿಕೃತ ಪತ್ರವನ್ನೂ ಹಂಚಿಕೊಂಡಿದ್ದಾರೆ. 'ನೀವು ಸಲ್ಲಿಸಿದ ವಲಸೆರಹಿತ ಅರ್ಜಿಯು ಅಮೆರಿಕದ ವಲಸೆ ನೀತಿ ಕಾನೂನಿನ್ವಯ ಇಲ್ಲದ ಕಾರಣ ತಿರಸ್ಕರಿಸಲಾಗಿದೆ. ನಿಮ್ಮ ತಾಯ್ನಾಡಿನೊಂದಿಗೆ ಬಲವಾದ ವೃತ್ತಿಪರ, ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ಸಂಬಂಧಗಳನ್ನು ನೀವು ಹೊಂದಬೇಕಾದ್ದು ಕಡ್ಡಾಯ' ಎಂದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries