HEALTH TIPS

ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಮತ ಪ್ರಮಾಣ ಏರಿಕೆ ಶಂಕೆ: ತನಿಖೆಗೆ YSRCP ಒತ್ತಾಯ

ಅಮರಾವತಿ: ಆಂಧ್ರಪ್ರದೇಶದ 2024ರ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ದಿನ ಅಂತಿಮ ಅವಧಿಯಲ್ಲಿ ಚಲಾವಣೆಯಾದ ಮತ ಪ್ರಮಾಣ ಶಂಕಾಸ್ಪದ ರೀತಿಯಲ್ಲಿ ಏರಿಕೆಯಾಗಿದ್ದ, ಈ ಬಗ್ಗೆ ಚುನಾವಣಾ ಆಯೋಗ ಸಮಗ್ರ ತನಿಖೆಗೆ ಆದೇಶಿಸುವಂತೆ ವೈಎಸ್‌ಆರ್‌ಸಿಪಿ ಪಕ್ಷದ ಹಿರಿಯ ನಾಯಕ ಎಸ್.ಶೈಲಜನಾಥ್ ಒತ್ತಾಯಿಸಿದ್ದಾರೆ.

'ಚುನಾವಣೆಯ ದಿನ ತಡರಾತ್ರಿ ನಡೆದ ಮತದಾನದ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡಿದ್ದು, ಇದು ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಅಧಿಕಾರಿಗಳು ತಕ್ಷಣ ಸ್ಪಷ್ಟೀಕರಣ ನೀಡಬೇಕು' ಎಂದು ಶನಿವಾರ ತಡರಾತ್ರಿ ಪಕ್ಷ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

2024 ಮೇ 13 ರಂದು ನಡೆದ ಚುನಾವಣೆಯಲ್ಲಿ ಆರಂಭದಲ್ಲಿ ಶೇ 68ರಷ್ಟು ಮತದಾನವಾಗಿದೆ ಎಂದು ಅಂದಾಜಿಸಲಾಗಿತ್ತು. ಆದರೆ ರಾತ್ರಿ 11.45 ರಿಂದ ಬೆಳಗಿನ ಜಾವ 2 ಗಂಟೆಯ ನಡುವೆ ಸುಮಾರು 50 ಲಕ್ಷ ಹೆಚ್ಚುವರಿ ಮತಗಳು ದಾಖಲಾಗಿವೆ. ಅಂತಿಮ ಶೇಕಡಾವಾರು ಮತದಾನ ಪ್ರಮಾಣ ಶೇ 81.85ಕ್ಕೆ ಏರಿಕೆಯಾಗಿದೆ. ಈ ವ್ಯತ್ಯಾಸದ ಬಗ್ಗೆ ಚುನಾವಣಾ ಸಮಿತಿಯು ವಿವರಣೆ ನೀಡಬೇಕು' ಎಂದು ಶೈಲಜಾನಾಥ್ ಒತ್ತಾಯಿಸಿದ್ದಾರೆ.

'ನಿಯಮಗಳ ಪ್ರಕಾರ, ಸಂಜೆ 5 ಗಂಟೆಯೊಳಗೆ ಮತ ಚಲಾವಣೆಗಾಗಿ ಸರದಿಯಲ್ಲಿದ್ದ ಮತದಾರರಿಗೆ ಮಾತ್ರ ಮತ ಚಲಾಯಿಸಲು ಅವಕಾಶ ನೀಡಲಾಗುತ್ತಿತ್ತು. ಆದರೆ 30,000 ಮತದಾರರಿಗೆ ಟೋಕನ್‌ಗಳನ್ನು ನೀಡಿದ್ದರೂ, ಸುಮಾರು 50,000 ಮತಗಳು ಅಂತಿಮವಾಗಿ ಚಲಾವಣೆಯಾಗಿದೆ' ಎಂದು ಅವರು ವಿವರಿಸಿದರು.

'ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಇದರ ಪಾವಿತ್ರ್ಯವನ್ನು ಎತ್ತಿಹಿಡಿಯಲು ಇಂತಹ ಅಸ್ಪಷ್ಟ ಬೆಳವಣಿಗೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಾಗಿದೆ' ಎಂದು ಶೈಲಜಾನಾಥ್ ಆಗ್ರಹಿಸಿದ್ದಾರೆ.

ಶೈಲಜಾನಾಥ್ ಅವರ ಆರೋಪಗಳನ್ನು ಅಲ್ಲಗಳೆದಿರುವ ಟಿಡಿಪಿ ನಾಯಕ ಎನ್. ವಿಜಯನ್, '2019ರ ವಿಧಾನಸಭಾ ಚುನಾವಣೆಯಲ್ಲೂ ಶೇಕಡಾವಾರು ಮತಪ್ರಮಾಣದಲ್ಲಿ ಏರಿಕೆಯಾದ ಘಟನೆ ನಡೆದಿದೆ' ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries