ಕೀವ್: ಇರಾನ್‌ನ ಡ್ರೋನ್ ದಾಳಿಯಿಂದ ರಕ್ಷಣೆ ಬಯಸಿ 11 ದೇಶಗಳು ನಮ್ಮ ಸಹಾಯ ಕೇಳಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಸೋಮವಾರ ಹೇಳಿದ್ದಾರೆ.
ಅಮೆರಿಕ ಹಾಗೂ ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಹತ್ಯೆಯಾದ ನಂತರ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾಗಿದೆ.
ಅದರ ನಂತರ ಇರಾನ್, ತನ್ನ ನೆರೆಯ ದೇಶಗಳ ಮೇಲೆ ಡ್ರೋನ್ ದಾಳಿ ನಡೆಸುತ್ತಿದೆ.
ಇರಾನ್‌ನ ನೆರೆಯ ದೇಶಗಳು ಹಾಗೂ ಯುರೋಪಿಯನ್ ದೇಶಗಳು ಸೇರಿದಂತೆ 11 ದೇಶಗಳು ನಮಗೆ ಮನವಿ ಮಾಡಿವೆ.
ಉಕ್ರೇನ್‌ನಲ್ಲಿ ವಿಶ್ವದರ್ಜೆಯ ಡ್ರೋನ್ ರಕ್ಷಣಾ ಸಾಮರ್ಥ್ಯವಿರುವ ಆಯುಧಗಳಿವೆ. ಇದರಿಂದಾಗಿ ನಮಗೆ ರಷ್ಯಾದ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದೆ. ಅವರ ಶೇ 80ರಷ್ಟು ಡ್ರೋನ್ ದಾಳಿಯನ್ನು ನಾವು ಸಮರ್ಥವಾಗಿ ಎದುರಿಸಿದ್ದೇವೆ ಎಂದು ಹೇಳಿದ್ದಾರೆ.
ಯಾವೆಲ್ಲಾ ದೇಶಗಳು ಸಹಾಯ ಕೇಳಿವೆ ಎನ್ನುವುದನ್ನು ಅವರು ಬಹಿರಂಗಪಡಿಸಿಲ್ಲ.
ಹಲವು ತಿಂಗಳಿನಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ರಷ್ಯಾ, ಇರಾನ್‌ನ ಮಿತ್ರರಾಷ್ಟ್ರವಾಗಿದೆ.

