HEALTH TIPS

ಮೊಜ್ತಾಬಾ ಖಮೇನಿ ಉತ್ತರಾಧಿಕಾರಿ: ಅಪ್ಪನ ಉತ್ತರಾಧಿಕಾರಿಯಾಗಿ ಮಗನ ಎಂಟ್ರಿ

ಟೆಹರಾನ್: ಇರಾನ್‌ನ ನೂತನ ಪರಮೋಚ್ಚ ನಾಯಕರನ್ನಾಗಿ ಅಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿಯನ್ನಾಗಿ 57 ವರ್ಷದ ಮೊಜ್ತಾಬಾ ಖಮೇನಿ ಅವರನ್ನು 88 ಸದಸ್ಯರ ತಜ್ಞರ ಮಂಡಳಿ ಆಯ್ಕೆ ಮಾಡಿದೆ ಎಂದು ತಿಳಿದುಬಂದಿದೆ.

ಫೆ.28ರಂದು ಅಮೆರಿಕ-ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಹತ್ಯೆಯಾಗಿದ್ದರು. ಅವರ ಹತ್ಯೆಗೆ ಇರಾನ್‌ನಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಮೊಜ್ತಾಬಾ ಖಮೇನಿ ಪರಿಚಯ

ಮೊಜ್ತಾಬಾ ಖಮೇನಿ ಅವರು 1969ರಲ್ಲಿ ಮಶಾದ್‌ನಲ್ಲಿ ಜನಿಸಿದರು. ಈ ವೇಳೆ ಇರಾನ್‌ನಲ್ಲಿ ಶಾ ಆಡಳಿತವಿತ್ತು. ಇದರ ವಿರುದ್ಧ ಅವರ ತಂದೆ ಅಯತೊಲ್ಲಾ ಅಲಿ ಖಮೇನಿ ಅವರು ಹೋರಾಡಿದ್ದರು.

ಇರಾನ್‌ನ ಧಾರ್ಮಿಕ ವ್ಯವಸ್ಥೆಯಲ್ಲಿನ ಇತರ ಹಿರಿಯ ನಾಯಕರಿಗೆ ಹೋಲಿಸಿದರೆ, ಮೊಜ್ತಾಬಾ ಅವರು ಉನ್ನತ ಮಟ್ಟದ ಧಾರ್ಮಿಕ ವಿದ್ವಾಂಸರಾಗಿ ಗುರುತಿಸಿಕೊಂಡಿಲ್ಲ. ಅವರು ಇದುವರೆಗೆ ಯಾವುದೇ ಚುನಾಯಿತ ಹುದ್ದೆಯನ್ನು ಅಲಂಕರಿಸಿಲ್ಲ ಅಥವಾ ಯಾವುದೇ ಅಧಿಕೃತ ಸರ್ಕಾರಿ ಜವಾಬ್ದಾರಿಯನ್ನು ಹೊಂದಿಲ್ಲ. ಆದಾಗ್ಯೂ, ತೆರೆಮರೆಯಲ್ಲಿ ಅವರು ಹೆಚ್ಚಿನ ಪ್ರಭಾವ ಹೊಂದಿದ್ದಾರೆ ಎನ್ನಲಾಗಿದೆ.

ವಿಶೇಷವಾಗಿ ಇರಾನ್‌ನ ಶಕ್ತಿಯುತ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್' (ಐಆರ್‌ಜಿಸಿ) ನೊಂದಿಗೆ ಅವರು ನಿಕಟ ಸಂಬಂಧ ಹೊಂದಿದ್ದಾರೆ. ಇರಾನ್-ಇರಾಕ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಅವರು, ನಂತರ ತಮ್ಮ ತಂದೆಯ ಕಚೇರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

ಯಾವುದೇ ಅಧಿಕೃತ ಹುದ್ದೆ ಹೊಂದಿಲ್ಲದಿದ್ದರೂ, ಪರಮೋಚ್ಛ ನಾಯಕನ ಪರವಾಗಿ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪದ ಮೇಲೆ 2019 ರಲ್ಲಿ ಅಮೆರಿಕ ಅವರ ಮೇಲೆ ನಿರ್ಬಂಧವನ್ನೂ ಹೇರಿತ್ತು.

ಮೊಜ್ತಾಬಾ ಆಯ್ಕೆಗೆ ಕಾರಣವೇನು?

ಇಸ್ಲಾಮಿಕ್ ಗಣರಾಜ್ಯದ ವ್ಯವಸ್ಥೆಯಲ್ಲಿ ವಂಶಪಾರಂಪರ್ಯದ ಆಡಳಿತಕ್ಕೆ ವಿರೋಧವಿದೆ. ತಂದೆಯ ನಂತರ ಮಗ ಅಧಿಕಾರಕ್ಕೆ ಬರುವುದನ್ನು ಶಿಯಾ ಧರ್ಮಗುರುಗಳ ಸಮಿತಿ ಒಪ್ಪುವುದಿಲ್ಲ. ಹೀಗಾಗಿ ಮೊಜ್ತಾಬಾ ಅವರ ಆಯ್ಕೆಯು ಐತಿಹಾಸಿಕ ಎನಿಸಿಕೊಳ್ಳಲಿದೆ.

'ಪರಮೋಚ್ಛ ನಾಯಕನ ಸ್ಥಾನಕ್ಕೆ ಮೊಜತಬಾ ಅವರನ್ನು ಆಯ್ಕೆ ಮಾಡುವುದು ಇರಾನ್‌ ಆಡಳಿತದಲ್ಲಿ ಐಆರ್‌ಜಿಸಿ ಹಿಡಿತ ಹೆಚ್ಚಿರುವುದನ್ನು ಸೂಚಿಸುತ್ತದೆ' ಎನ್ನುತ್ತಾರೆ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಪಕ ಅಲಿ ನಾಸರ್.

'ಬಿಕ್ಕಟ್ಟಿನ ಸಂದರ್ಭದಲ್ಲಿ ತಂದೆಯ ಆಳ್ವಿಕೆಯ ಮುಂದುವರಿಕೆ ಎಂದು ಮೊಜ್ತಾಬಾ ಬೆಂಬಲಿಗರು ನೋಡಬಹುದು. ಆದರೆ, ರಾಜಕೀಯ ವಿಶ್ಲೇಷಕರ ಪ್ರಕಾರ, ಇದು ವಂಶಾಡಳಿತವನ್ನು ವಿರೋಧಿಸುವ ವ್ಯವಸ್ಥೆಯೊಳಗೆ ವ್ಯವಸ್ಥಿತವಾಗಿ ಸ್ಥಾನ ಭದ್ರಪಡಿಸಿಕೊಳ್ಳುವ ತಂತ್ರವಾಗಿದೆ' ಎಂದು ಅವರು ಹೇಳಿದ್ದಾರೆ.

ಸಂವಿಧಾನಾತ್ಮಕವಾಗಿ ಪರಮೋಚ್ಛ ನಾಯಕನನ್ನು ನೇಮಿಸುವ ಅಧಿಕಾರವನ್ನು 88 ಸದಸ್ಯರನ್ನೊಳಗೊಂಡ 'ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್' ಹೊಂದಿದೆ. ಇರಾನ್‌ ಇತಿಹಾಸದಲ್ಲಿ ಈ ಮಂಡಳಿಯು ಹೊಸ ನಾಯಕನನ್ನು ಆಯ್ಕೆ ಮಾಡುತ್ತಿರುವುದು ಇದು ಕೇವಲ ಎರಡನೇ ಬಾರಿಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries