HEALTH TIPS

ಭಾರತೀಯ ಕಚ್ಚಾತೈಲ ದರ ಬ್ಯಾರಲ್‍ಗೆ 137 ಡಾಲರ್ : ಮಧ್ಯಪ್ರಾಚ್ಯ ಸಂಘರ್ಷದ ಬಳಿಕ ಶೇ.93ರಷ್ಟು ಏರಿಕೆ

ನವದೆಹಲಿ: ಕೊಲ್ಲಿ ಸಂಘರ್ಷ ಆರಂಭದ ಬಳಿಕ ಭಾರತೀಯ ಶುದ್ಧೀಕರಣ ಘಟಕಗಳ ಕಚ್ಚಾತೈಲದ ವೆಚ್ಚ ಶೇಕಡ 93ರಷ್ಟು ಏರಿಕೆಯಾಗಿದ್ದು, ಶುಕ್ರವಾರ ಪ್ರತಿ ಬ್ಯಾರಲ್ ದರ 136.56ಕ್ಕೆ ತಲುಪಿದೆ. ಇದರಿಂದಾಗಿ ಇಂಡಿಯನ್ ಆಯಿಲ್, ಎಚ್‍ಪಿಸಿಲ್ ಮತ್ತು ಬಿಪಿಸಿಎಲ್‍ನಂಥ ಸರ್ಕಾರಿ ತೈಲ ಮಾರಾಟ ಕಂಪನಿಗಳಿಂದ ಹಿಡಿದು ರಿಲಯನ್ಸ್ ಇಂಡಸ್ಟ್ರೀಸ್‍ನಂಥ ಖಾಸಗಿ ಕಂಪನಿಗಳವರೆಗೆ ಲಾಭ ಅಳಿಸಿಹೋಗಿದೆ.

ಅಮೆರಿಕ ಸೇರಿದಂತೆ ಹಲವು ದೇಶಗಳು ಕಚ್ಚಾ ತೈಲ ಬೆಲೆ ಏರಿಕೆಗೆ ಅನುಗುಣವಾಗಿ ಚಿಲ್ಲರೆ ಬೆಲೆಯನ್ನು ಏರಿಸಿವೆ. ಆದರೆ ಭಾರತದಲ್ಲಿ ತೈಲ ಕಂಪನಿಗಳು ಪಂಪ್ ಬೆಲೆಯನ್ನು ಇದುವರೆಗೆ ಹಾಗೆಯೇ ಉಳಿಸಿಕೊಂಡಿವೆ. ಇದು ಹಲವು ತಿಂಗಳುಗಳಿಂದ ಕಂಪನಿಗಳು ಗಳಿಸುತ್ತಿದ್ದ ಲಾಭಕ್ಕೆ ತೀವ್ರ ಹೊಡೆತ ನೀಡಿದೆ. ಬಜೆಟ್ ಗುರಿಗಳಿಗೆ ಅನುಗುಣವಾಗಿ ತೆರಿಗೆ ಹಾಗೂ ಹಣಕಾಸು ಸಮತೋಲನ ಕಾಪಾಡುವ ಸಲುವಾಗಿ ಮಾ.31ರವರೆಗೆ ಸರ್ಕಾರ ಬೆಲೆಯನ್ನು ಬದಲಿಸುವ ಸಾಧ್ಯತೆ ಇಲ್ಲ.

ಯುದ್ಧಪೀಡಿತ ಪ್ರದೇಶಗಳ ಮೂಲಕ ಹಾದುಹೋಗುವ ಹಡಗುಗಳ ಚಲನೆ ಸಹಜ ಸ್ಥಿತಿಗೆ ಬರುವವರೆಗೆ ಕಚ್ಚಾ ತೈಲ ಬೆಲೆಯಲ್ಲಿ ಚಂಚಲತೆ ಮುಂದುವರಿಯಲಿದೆ. ನಾಲ್ಕು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಏ.29ರಂದು ಕೊನೆಯ ಹಂತದ ಮತದಾನ ಮುಗಿಯುವವರೆಗೂ ಬೆಲೆ ಏರಿಕೆಗೆ ಹಸಿರು ನಿಶಾನೆ ಸಿಗುವುದು ಕಷ್ಟಸಾಧ್ಯ ಎಂದು ಹೇಳಲಾಗಿದೆ.

ಅಮೆರಿಕದಲ್ಲಿ ಗ್ಯಾಲನ್ ಗ್ಯಾಸೋಲಿನ್ ದರ 3.7 ಡಾಲರ್ ಆಗಿದ್ದು, ಯುದ್ಧಾರಂಭದ ಬಳಿಕ ಬ್ರೆಂಟ್ ಕ್ರೂಡ್ ದರ ಶೇಕಡ 40ರಷ್ಟು ಹೆಚ್ಚಿದೆ. ರಷ್ಯನ್ ಉರಲ್ಸ್ ಕಚ್ಚಾತೈಲ ದರ ಈ ಅವಧಿಯಲ್ಲಿ ಶೇಕಡ 50ರಷ್ಟು ಹೆಚ್ಚಿದೆ.

ಒಮನ್ ಮತ್ತು ದುಬೈ ಸೇರಿದಂತೆ ಹಲವು ದೇಶಗಳಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತಕ್ಕೆ ಫೆ.26ರಂದು ಇದ್ದ ದರ 70.9 ಡಾಲರ್ ನಿಂದ ಮಾ.12ಕ್ಕೆ 127.2 ಡಾಲರ್ ಗೆ ಹೆಚ್ಚಿತ್ತು. ಶುಕ್ರವಾರ ಮತ್ತೆ ಪ್ರತಿ ಬ್ಯಾರಲ್ ದರ 9.3 ಡಾಲರ್ ಅಥವಾ ಶೇಕಡ 7.3ರಷ್ಟು ಹೆಚ್ಚಿ 136.5 ಡಾಲರ್ ತಲುಪಿದೆ ಎಂದು ಅಧಿಕೃತ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries