HEALTH TIPS

ಆಂಧ್ರದಲ್ಲಿ ಅಪಘಾತವಾಗಿ ಹೊತ್ತಿ ಉರಿದ ಟಿಪ್ಪರ್, ಬಸ್: 13 ಮಂದಿ ಸಜೀವ ದಹನ

 ಹೈದರಾಬಾದ್‌: ಖಾಸಗಿ ಬಸ್‌ ಹಾಗೂ ಟಿಪ್ಪರ್‌ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ, ಬೆಂಕಿ ಹೊತ್ತಿಕೊಂಡು 13 ಮಂದಿ ಸಜೀವ ದಹನವಾಗಿರುವ ದುರ್ಘಟನೆ ಆಂಧ್ರಪ್ರದೇಶ ಮಾರ್ಕಪುರಂ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ. 


ಹರಿಕೃಷ್ಣ ಟ್ರಾವೆಲ್ಸ್‌ಗೆ ಸೇರಿದ ಬಸ್‌ ಹಾಗೂ ಜಲ್ಲಿ ತುಂಬಿದ್ದ ಟಿಪ್ಪರ್‌ ನಡುವೆ ಮಾರ್ಕಪುರಂ ಸಮೀಪದ ರಾಯವರಂ ಎಂಬಲ್ಲಿ ಅಪಘಾತವಾಗಿದೆ.

ಡಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಎರಡೂ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ ಎಂದು ಮಾರ್ಕಪುರಂ ಪೊಲೀಸರು ತಿಳಿಸಿದ್ದಾರೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಆಂಧ್ರದಲ್ಲಿ ಅಪಘಾತವಾಗಿ ಹೊತ್ತಿ ಉರಿದ ಟಿಪ್ಪರ್, ಬಸ್: 14 ಮಂದಿ ಸಜೀವ ದಹನ

ಒಂದು ಸಾಲಿನಲ್ಲಿಆಂಧ್ರಪ್ರದೇಶದ ಮಾರ್ಕಪುರಂ ಸಮೀಪ ಖಾಸಗಿ ಬಸ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 14 ಮಂದಿ ಸಜೀವ ದಹನವಾಗಿದ್ದು, ಹಲವರು ಗಾಯಗೊಂಡಿದ್ದಾರೆ.ಪ್ರಮುಖ ಸಂಗತಿಗಳು&buಟಟ; ದುರಂತದ ವಿವರಗಳುತೆಲಂಗಾಣದ ಜಗಿತಿಯಾಲ್‌ನಿಂದ ಮಿಜಾಮುರಿಗೆ ಪ್ರಯಾಣಿಸುತ್ತಿದ್ದ ಹರಿಕೃಷ್ಣ ಟ್ರಾವೆಲ್ಸ್ ಬಸ್ ಮತ್ತು ಜಲ್ಲಿ ತುಂಬಿದ್ದ ಟಿಪ್ಪರ್ ನಡುವೆ ಮಾರ್ಕಪುರಂನ ರಾಯವರಂ ಸಮೀಪ ಅಪಘಾತ ಸಂಭವಿಸಿದೆ.&buಟಟ; ಅಪಘಾತಕ್ಕೆ ಮುಖ್ಯ ಕಾರಣಟಿಪ್ಪರ್ ಲಾರಿಯ ಅತಿವೇಗದ ಚಾಲನೆಯೇ ಈ ಭೀಕರ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.&buಟಟ; ಪ್ರಾಣಹಾನಿ ಮತ್ತು ರಕ್ಷಣೆಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ 14 ಮಂದಿ ಬೆಂಕಿಗೆ ಆಹುತಿಯಾಗಿದ್ದಾರೆ. ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.ಪ್ರಮುಖ ಅಂಕಿಅಂಶಗಳು14ಮೃತಪಟ್ಟವರ ಸಂಖ್ಯೆ20ಕ್ಕೂ ಹೆಚ್ಚುಬಸ್ಸಿನಲ್ಲಿದ್ದ ಒಟ್ಟು ಪ್ರಯಾಣಿಕರುಬೆಳಿಗ್ಗೆ 6 - 6.30ಅಪಘಾತ ಸಂಭವಿಸಿದ ಸಮಯಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಬಸ್‌, ತೆಲಂಗಾಣದ ಜಗಿತಿಯಾಲ್‌ನಿಂದ ಆಂಧ್ರಪ್ರದೇಶದ ಮಿಜಾಮುರಿಗೆ ತೆರಳುತ್ತಿತ್ತು. ಕಲ್ಲು ಕ್ವಾರಿಯ ಸಮೀಪ ತಿರುವಿನಲ್ಲಿ ಬೆಳಿಗ್ಗೆ 6 - 6.30ರ ಸುಮಾರಿಗೆ ಅಪಘಾತವಾಗಿದೆ. ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರು, ಆಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಟಿಪ್ಪರ್‌ ಲಾರಿ ಅತಿ ವೇಗದಲ್ಲಿ ಚಲಿಸುತ್ತಿತ್ತು. ಅದೇ ದುರಂತಕ್ಕೆ ಕಾರಣ. ಅಪಘಾತಕ್ಕೀಡಾದ ಬಸ್‌ನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಹಿಂದಿನ ಸೀಟುಗಳಲ್ಲಿ ಕುಳಿತಿದ್ದವರು, ತಪ್ಪಿಸಿಕೊಳ್ಳಲಾಗದೆ ಆಹುತಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries