ಹೈದರಾಬಾದ್: 'ಡಿಜಿಟಲ್ ಅರೆಸ್ಟ್' ಹೆಸರಿನ ಬೆದರಿಕೆಯ ವಂಚನೆ ಜಾಲಕ್ಕೆ ಸಿಲುಕಿದ ನಿವೃತ್ತ ಜಿಲ್ಲಾ ನ್ಯಾಯಾಧೀಶರೊಬ್ಬರು ₹1 ಕೋಟಿಗೂ ಹೆಚ್ಚು ಮೊತ್ತವನ್ನು ಕಳೆದುಕೊಂಡಿದ್ದಾರೆ.
'ಮಹಿಳೆಯರ ಕಳ್ಳಸಾಗಣೆ ಸೇರಿದಂತೆ ಇತರ ಅಪರಾಧಗಳಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಬಳಕೆಯಾಗಿದೆ' ಎಂದು ಸೈಬರ್ ವಂಚಕರು ಆರೋಪಿಸಿ, 69 ವರ್ಷದ ನಿವೃತ್ತ ನ್ಯಾಯಾಧೀಶರನ್ನು ವಾರದ ಹಿಂದೆ ಬೆದರಿಸಿದ್ದಾರೆ.
ನಿವೃತ್ತ ನ್ಯಾಯಾಧೀಶರು ಸೈಬರ್ ವಂಚಕರು ಹೇಳಿದಂತೆ ₹1 ಕೋಟಿಗೂ ಹೆಚ್ಚು ಮೊತ್ತವನ್ನು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ವಂಚನೆಗೊಳಗಾಗಿದ್ದು ಗೊತ್ತಾದ ಬಳಿಕ ಮೂರು ದಿನದ ಹಿಂದೆ ದೂರು ದಾಖಲಿಸಿದ್ದು, ತನಿಖೆ ನಡೆದಿದೆ.

