ಕಾಸರಗೋಡು: ಜಿಲ್ಲೆಯಲ್ಲಿ ಅಸೌಖ್ಯಪೀಡಿತರಾಗಿ ಹಾಸಿಗೆ ಹಿಡಿದವರು, 85 ವರ್ಷ ಮೇಲ್ಪಟ್ಟವರು, ಅಂಗವಿಕಲರು ಮತ್ತು ಮತಗಟ್ಟೆಯಲ್ಲಿ ವೈಯಕ್ತಿಕವಾಗಿ ಮತ ಚಲಾಯಿಸಲು ಸಾಧ್ಯವಾಗದ ಇತರ ಮತದಾರರಿಗಿರುವ ಮನೆ ಮತದಾನದ ಅರ್ಜಿ ನಮೂನೆ(12ಡಿ ಫಾರ್ಮ್‍ಗಳು)ಗಳ ವಿತರಣಾ ಕಾರ್ಯ ಆರಂಭಗೊಮಡಿದೆ. ಫಾರ್ಮ್‍ಗಳನ್ನು ಬಿಎಲ್‍ಒಗಳ ಮೂಲಕ ವಿತರಿಸಲಾಗುತ್ತಿದ್ದು, ಭರ್ತಿ ಮಾಡಿದ ಫಾರ್ಮ್ ಬಿಎಲ್‍ಒಗಳು ಮೊಬೈಲ್ ಅಪ್ಲಿಕೇಶನ್‍ನಲ್ಲಿ ಅರ್ಜಿಗಳನ್ನು ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡಿದ ನಂತರ ಅವುಗಳನ್ನು ರಿಟನಿರ್ಂಗ್ ಅಧಿಕಾರಿಗಳಿಗೆ ಹಸ್ತಾಂತರಿಸುತ್ತಾರೆ. ನಂತರ ಮತಗಟ್ಟೆ ಅಧಿಕಾರಿಗಳು ಮತಪತ್ರಗಳನ್ನು ನೇರವಾಗಿ ಮನೆಗೆ ತಲುಪಿಸುತ್ತಾರೆ. ಈ ಮೂಲಕ ಮನೆಯಿಂದಲೇ ಮತ ಚಲಾಯಿಸುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಪರವನಡ್ಕದ 91ರ ಹರೆಯದ ಖದೀಜಾಬಿ ಅವರಿಗೆ ಬಿಎಲ್‍ಒ ಅವರು ಮನೆ ಮತದಾನಕ್ಕಾಗಿ ಫಾರ್ಮ್ 12ಡಿ ವಿತರಿಸಿದರು.


