HEALTH TIPS

ವಿಧಾನಸಭಾ ಚುನಾವಣೆ-ಜಿಲ್ಲೆಗೆ ನಿಯೋಜಿತರಾದ ನಿರೀಕ್ಷಕರ ಭೇಟಿ

ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆ 2026 ಕಾಸರಗೋಡು ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗದಿಂದ ನಿಯೋಜಿಸಲಾದ ವಿವಿಧ ನಿರೀಕ್ಷಕರು ಜಿಲ್ಲಾ ಮಾಹಿತಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.  


ಉದುಮ, ಕಾಞಂಗಾಡ್ ಮತ್ತು ತ್ರಿಕರಿಪುರ ಕ್ಷೇತ್ರಗಳಿಗೆ ¸ನಿರೀಕ್ಷಕ ಜ್ಞಾನೇಶ್ವರ್ ಕೊಂಡಿಭಾವು ಖಿಲಾರಿ ಐಎಎಸ್, ಮಂಜೇಶ್ವರಂ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರಗಳ ನಿರೀಕ್ಷಕ ವಿಜಯ್ ಬಾಲಕೃಷ್ಣ ವಾಘ್ಮಾರ್ ಐಎಎಸ್, ಜಿಲ್ಲಾ ಪೆÇಲೀಸ್ ನಿರೀಕ್ಷಕ ಅಶುತೋಷ್ ಕುಮಾರ್ ಐಪಿಎಸ್,  ಕಾಸರಗೋಡು ಮಂಜೇಶ್ವರಂ ಮತ್ತು ಉದುಮ ಕ್ಷೇತ್ರಗಳ ಖರ್ಚು-ವೆಚ್ಚ ನಿರೀಕ್ಷಕ ನಿಶಾಂತ್ ಅಗರ್ವಾಲ್ ಐಆರ್‍ಎಸ್,  ಕಾಂಞಂಗಾಡ್ ಮತ್ತು ತ್ರಿಕರಿಪುರ ಕ್ಷೇತ್ರಗಳ ಖರ್ಚು ವೆಚ್ಚ ನಿರೀಕ್ಷಕ ಅಜಯ್ ಕುಮಾರ್ ಥಾಡಿಯಾ ಐಆರ್‍ಎಸ್ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಚುನಾವಣಾ ಸಿದ್ಧತೆಗಳ ಬಗ್ಗೆ ವೀಕ್ಷಕರು ತೃಪ್ತಿ ವ್ಯಕ್ತಪಡಿಸಿದರು. 

ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ  ವಿಜಯ್ ಭರತ್ ರೆಡ್ಡಿ ಉಪಸ್ಥಿತರಿದ್ದರು. ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಎ.ಎನ್. ಗೋಪಕುಮಾರ್, ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂಧನನ್, ಖರ್ಚುವೆಚ್ಚ ನೋಡಲ್ ಅಧಿಕಾರಿ ವಿ. ಚಂದ್ರನ್, ನಿರೀಕ್ಷಕ ನೋಡಲ್ ಅಧಿಕಾರಿ ಜೆ.ಕೆ. ಜಿಜೇಶ್ ಕುಮಾರ್, ಸಹಾಯಕ ಸಂಪಾದಕಿ ಎ.ಪಿ. ದಿಲ್ನಾ, ಸಹಾಯಕ ಮಾಹಿತಿ ಅಧಿಕಾರಿ ಎಸ್. ಚಿಲಂಕಾ, ಜಿಲ್ಲಾ ಮಾಹಿತಿ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries