ಡೆಲ್ಲಿ ಎಲ್ಡರ್ ಫ್ರೆಂಡ್ಲಿ ಉಪಕ್ರಮದ ಅಧ್ಯಯನದ ಪ್ರಕಾರ, ಶೇ.86ರಷ್ಟು ವೃದ್ಧರಿಗೆ ಡಿಜಿಟಲ್ ಸಾಕ್ಷರತೆಯ ಕೊರತೆ ಇದೆ. ಇದರಿಂದಾಗಿ ಆರೋಗ್ಯ ಸೇವೆಗಳು ಮತ್ತು ಆನ್ಲೈನ್ ಸೇವೆಗಳಿಗೆ ಅವರ ಪ್ರವೇಶ ಸೀಮಿತಗೊಂಡಿದೆ. ಇದೇ ರೀತಿ ದಿಲ್ಲಿ ಎನ್ಸಿಆರ್ನಲ್ಲಿ ವಾಸಿಸುತ್ತಿರುವ ಶೇ.85ರಷ್ಟು ವೃದ್ಧರಿಗೆ ಡಿಜಿಟಲ್ ಸಾಕ್ಷರತೆಯ ಕೊರತೆ ಇದೆ ಹಾಗೂ ಸಾಮಾಜಿಕವಾಗಿ ಬಹಿಷ್ಕೃತಗೊಂಡಿದ್ದೇವೆ ಎಂಬ ಭಾವನೆ ಇದೆ ಎಂದು ಏಜ್ ವೆಲ್ ಫೌಂಡೇಶನ್ ಅಧ್ಯಯನದಲ್ಲಿ ತಿಳಿದು ಬಂದಿದೆ.
ಈ ನಡುವೆ, ಭಾರತದಲ್ಲಿನ ಹಿರಿಯ ನಾಗರಿಕರ ಆರೈಕೆ ವಲಯ ಕ್ಷಿಪ್ರವಾಗಿ ವಿಸ್ತರಿಸುತ್ತಿದೆ. 2030ರ ವೇಳೆಗೆ 15,000 ಸೌಲಭ್ಯಗಳು ನಿರ್ಮಾಣವಾಗಲಿವೆ ಎಂದು ಅಂದಾಜಿಸಲಾಗಿದ್ದು, ಇದಕ್ಕಾಗಿ 26,000 ಕೋಟಿ ರೂ.ಹೂಡಿಕೆ ಅಗತ್ಯವಿದೆ. 2030ರ ವೇಳೆಗೆ 20-21 ಲಕ್ಷ ಹಿರಿಯ ನಾಗರಿಕರ ವಸತಿ ಘಟಕಗಳ ಅಗತ್ಯವಿದೆ ಎಂದು ನೈಟ್ ಫ್ರಾಂಕ್ ವರದಿಯಲ್ಲಿ ಅಂದಾಜಿಸಲಾಗಿದೆ. 2013ರಿಂದ ಇಲ್ಲಿಯವರೆಗೆ ಅಂಗಾಂಗ ಕಸಿಯು ನಾಲ್ಕು ಪಟ್ಟು ವೃದ್ಧಿಯಾಗಿದೆ ಎಂದೂ ವರದಿ ಬೆಳಕು ಚೆಲ್ಲಿದೆ.

