HEALTH TIPS

SIR: ಬಿಎಲ್‍ಒಗಳ ದಿನಗೂಲಿ ರೂ. 20 ಕ್ಕಿಂತ ಕಡಿಮೆಗೆ ಇಳಿಸಿ ಕೈಚೆಲ್ಲಿದ ಅಧಿಕೃತರು

ತಿರುವನಂತಪುರಂ: ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ(ಎಸ್.ಐ.ಆರ್.) ಭಾಗವಹಿಸಿದ ಬಿಎಲ್‍ಒಗಳ ಸಂಭಾವನೆಯನ್ನು ಕಡಿತಗೊಳಿಸಲಾಗಿದೆ. 6000 ರೂ.ಗಳ ಘೋಷಣೆಯೊಂದಿಗೆ ಪ್ರಾರಂಭಿಸಲಾದ ಕೆಲಸವನ್ನು ಅದು ಪೂರ್ಣಗೊಂಡಾಗ 2000 ರೂ.ಗಳಿಗೆ ಕಡಿತಗೊಳಿಸಲಾಗಿದೆ. ಬಿಎಲ್‍ಒಗಳು ಇದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ನಾಲ್ಕು ತಿಂಗಳ ಕೆಲಸಕ್ಕೆ ಅವರಿಗೆ ದಿನಕ್ಕೆ ರೂ. 20 ಕ್ಕಿಂತ ಕಡಿಮೆ ಲಭಿಸಿದಂತಾಗುದೆ. 


ಕೇರಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ನವೆಂಬರ್ 4 ರಿಂದ ಫೆಬ್ರವರಿ 21 ರವರೆಗೆ ನಡೆಸಲಾಯಿತು. ಚುನಾವಣಾ ಆಯೋಗವು ನಿಯೋಜಿಸಿದ ಎಲ್ಲಾ ಕೆಲಸಗಳನ್ನು ಅವರು ಹಗಲಿರುಳು ದುಡಿದು ಪೂರ್ಣಗೊಳಿಸಿದರು, ಅನೇಕ ಸವಾಲುಗಳನ್ನು ಎದುರಿಸಿ, ಲೋಪಗಳಿಲ್ಲದೆ ಪೂರ್ಣಗೊಳಿಸಲಾಗಿದೆ. 

ಇವರಲ್ಲಿ ಹೆಚ್ಚಿನವರು ತಮ್ಮ ಸ್ವಂತ ಸಂಸ್ಥೆಗಳಲ್ಲಿ ತಮ್ಮ ಕೆಲಸದೊಂದಿಗೆ ಸಮಾನಾಂತರವಾಗಿ, ಪೂರ್ಣಾವಧಿಯಾಗಿ ಕಾರ್ಯನಿರ್ವಹಿಸಿ ಅಂತಿಮಗೊಳಿಸಿರುವರು. ಹಲವರು ಮಾನಸಿಕ ಒತ್ತಡವನ್ನು ಅನುಭವಿಸಿದರು. ಅನೇಕ ಜನರು ಕ್ಷೇತ್ರಕಾರ್ಯಕ್ಕಾಗಿ ತಮ್ಮ ಸ್ವಂತ ಜೇಬಿನಿಂದ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಪ್ರಸ್ತುತ ದ್ವಿಚಕ್ರ ವಾಹನಗಳಿಗೆ ಇಂಧನಕ್ಕಾಗಿ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚಿನದನ್ನು ಖರ್ಚು ಮಾಡಲಾಗಿದೆ.

ಕೆಲಸದ ಒತ್ತಡ ಮತ್ತು ಇತರ ಅಂಶಗಳಿಂದಾಗಿ ಬಿಎಲ್‍ಒಗಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಕೂಡಾ ನಡೆದಿವೆ. ಕಷ್ಟಪಟ್ಟು ಕೆಲಸ ಮಾಡಿದರೂ ಸರಿಯಾದ ಪರಿಹಾರವನ್ನು ನೀಡದೆ ಅವಮಾನಿಸುವ ಅಭ್ಯಾಸವು ತುಂಬಾ ಕಷ್ಟಕರವಾಗಿದೆ ಮತ್ತು ತಮ್ಮ ಕರ್ತವ್ಯನಿಷ್ಠೆಗೆ ತೃಣ ಬೆಲೆಯನ್ನೂ ಕಲ್ಪಿಸಲಾಗಿಲ್ಲವೆಂದು ಬಿಎಲ್‍ಒಗಳು ಹೇಳುತ್ತಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries