ದುಬೈ: ದಾಳಿಯನ್ನು ನಿಲ್ಲಿಸುವಂತೆ ಹಾಗೂ ಹೊರ್ಮುಜ್ ಜಲಸಂಧಿಯನ್ನು ತೆರೆಯುವಂತೆ, 22 ರಾಷ್ಟ್ರಗಳು ಇರಾನ್ ಅನ್ನು ಶನಿವಾರ ಒತ್ತಾಯಿಸಿವೆ.
ಯುನೈಟೆಡ್ ಅರಬ್ ಎಮಿರೇಟ್ಸ್, ಬಹರೇನ್, ಬ್ರಿಟನ್, ಜರ್ಮನಿ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ ಹಾಗೂ ಆಸ್ಟ್ರೇಲಿಯಾ ಸೇರಿದಂತೆ 22 ರಾಷ್ಟ್ರಗಳು, ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವ ಇರಾನ್‌ನ ನಡೆಯನ್ನು ಖಂಡಿಸಿವೆ.
ವಾಣಿಜ್ಯ ಹಡಗುಗಳು, ತೈಲ ಹಾಗೂ ಅನಿಲ ಸೌಲಭ್ಯದ ಮೇಲಿನ ದಾಳಿಗೂ ಆಕ್ರೋಶ ವ್ಯಕ್ತಪಡಿಸಿವೆ.
'ಪ್ರಪಂಚದ ಎಲ್ಲಾ ಭಾಗದ ಜನರು, ಅದರಲ್ಲೂ ದುರ್ಬಲ ವರ್ಗದವರು, ಇರಾನ್ ಕೈಗೊಂಡಿರುವ ಕ್ರಮಗಳ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ' ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

