HEALTH TIPS

ಗ್ಯಾಸ್ ಟ್ರಬಲ್ ಮಧ್ಯೆ ಕೊಂಚ ನಿರಾಳ: ಭಾರತಕ್ಕೆ ಎರಡು ತೈಲ ಹಡಗು ಆಗಮನ; ಮಂಗಳೂರು ತಲುಪಿದ 26 ಸಾವಿರ ಮೆಟ್ರಿಕ್ ಟನ್ LPG

ಕಚ್ಚ್: ಒಟ್ಟು 46,000 ಮೆಟ್ರಿಕ್ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಾಗಿಸುತ್ತಿದ್ದ ಭಾರತದ ತೈಲ ಸಾಗಣೆ ಹಡಗು ಶಿವಾಲಿಕ್ ನಿನ್ನೆ ಸೋಮವಾರ ಸಂಜೆ ಗುಜರಾತ್ ನ ಮುಂದ್ರಾ ಬಂದರಿಗೆ ತಲುಪಿದೆ. ಇದರಲ್ಲಿ 20,000 ಮೆಟ್ರಿಕ್ ಟನ್ ಎಲ್ ಪಿಜಿಯನ್ನು ಮುಂದ್ರಾದಲ್ಲಿ ಇಳಿಸಲಾಗುತ್ತದೆ, ಉಳಿದ 26,000 ಮೆಟ್ರಿಕ್ ಟನ್ ನಿನ್ನೆ ಮಂಗಳೂರು ಬಂದರು ತಲುಪಿದೆ.

ಈ ಹಡಗು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಆರ್ಡರ್ ಮಾಡಿದ ಎಲ್ ಪಿಜಿಯನ್ನು ಸಾಗಿಸುತ್ತದೆ.

ನಿನ್ನೆ ದೆಹಲಿಯಲ್ಲಿ ನಡೆದ ಮಧ್ಯಪ್ರಾಚ್ಯದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ ಸಚಿವಾಲಯ ಸಭೆಯಲ್ಲಿ ಮಾತನಾಡಿದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ, ಶಿವಾಲಿಕ್ ಹಡಗಿನ ಸರಕು ಇಳಿಸುವಲ್ಲಿ ಯಾವುದೇ ವಿಳಂಬವಾಗದಂತೆ ಬಂದರಿನಲ್ಲಿ ಅಗತ್ಯ ದಾಖಲೆ ಕ್ರಮಗಳು ಹಾಗೂ ಆದ್ಯತೆಯ ತಂಗುದಾಣ (priority berthing) ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಈ ಹಡಗು ಸುಮಾರು 81,000 ಟನ್ ಮುರ್ಬನ್ ಕಚ್ಚಾ ತೈಲವನ್ನು ಸಾಗಿಸುತ್ತಿದ್ದು, ಇದು ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಲ್ಲಿ ಉತ್ಪಾದಿಸಲಾಗುವ ತೈಲ ಪ್ರಭೇದವಾಗಿದೆ. ಈ ಸರಕುಗಳನ್ನು ನಂತರ ವಿವಿಧ ದೇಶಗಳಿಗೆ ಸಾಗಿಸಲಾಗುತ್ತದೆ. ಮುಂದ್ರಾ ಬಂದರುದಲ್ಲಿ ವಿಶೇಷ ಸಂಗ್ರಹಣೆ (ಸ್ಟೋರೇಜ್) ವ್ಯವಸ್ಥೆ ಇದೆ.

ಇದೇ ವೇಳೆ ಮತ್ತೊಂದು ಎಲ್ ಪಿಜಿ ಸಾಗಿಸುತ್ತಿರುವ ಭಾರತೀಯ ಹಡಗು 'ನಂದಾ ದೇವಿ' ಇಂದು ಬಂದರಿಗೆ ತಲುಪಲಿದೆ ಎಂದು ಶಿಪ್ಪಿಂಗ್ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಯುಎಇಯಿಂದ ಹೊರಟ ಭಾರತೀಯ ಧ್ವಜ ಹೊಂದಿರುವ 'ಜಗ್ ಲಾಡ್ಕಿ' ಹಡಗು ಸುಮಾರು 81,000 ಟನ್ ಮುರ್ಬನ್ ಕಚ್ಚಾ ತೈಲವನ್ನು ಸಾಗಿಸಿಕೊಂಡು ಸುರಕ್ಷಿತವಾಗಿ ಭಾರತಕ್ಕೆ ಬರುತ್ತಿದೆ ಎಂದು ರಾಜೇಶ್ ಕುಮಾರ್ ಸಿನ್ಹಾ ಹೇಳಿದರು. ಪರ್ಷಿಯನ್ ಗಲ್ಪ್ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತರಾಗಿದ್ದಾರೆ, ಕಳೆದ 24 ಗಂಟೆಗಳಲ್ಲಿ ಯಾವುದೇ ಘಟನೆ ವರದಿಯಾಗಿಲ್ಲ ಎಂದರು.

ಪ್ರಸ್ತುತ ಪರ್ಷಿಯನ್ ಗಲ್ಪ್ ಪ್ರದೇಶದಲ್ಲಿ 22 ಭಾರತೀಯ ಧ್ವಜದ ಹಡಗುಗಳು ಇದ್ದು, ಅವುಗಳಲ್ಲಿ ಒಟ್ಟು 611 ಭಾರತೀಯ ನಾವಿಕರು ಕೆಲಸ ಮಾಡುತ್ತಿದ್ದಾರೆ.

ಇದಕ್ಕೂ ಮೊದಲು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ಹೋರ್ಮುಜ್ ಸಮುದ್ರಸಂಧಿ ಮೂಲಕ ಸಾಗುವ ಸಮುದ್ರ ಸಾರಿಗೆಯನ್ನು ಪುನಾರಂಭಿಸಲು ಇರಾನ್‌ನೊಂದಿಗೆ ನೇರ ಸಂವಾದವೇ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ಹೇಳಿದ್ದಾರೆ. ಮಧ್ಯಪ್ರಾಚ್ಯದ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಭಾರತ ತನ್ನ ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಜಗತ್ತಿನ ಒಟ್ಟು ತೈಲ ವ್ಯಾಪಾರದ ಸುಮಾರು 20 ಶೇಕಡಾವರೆಗೆ ಹಾದಿಯಾಗಿರುವ ಈ ಪ್ರಮುಖ ಸಮುದ್ರ ಮಾರ್ಗವನ್ನು ಮತ್ತೆ ತೆರೆಯಲು ಭಾರತ ಈಗ ಇರಾನ್‌ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಇರಾನ್‌ನೊಂದಿಗೆ ಸಂಪರ್ಕ ಕಡಿತಗೊಳಿಸುವುದಕ್ಕಿಂತ ತರ್ಕಬದ್ಧವಾಗಿ ಮಾತನಾಡಿ ಸಮನ್ವಯ ಸಾಧಿಸುವುದು ಉತ್ತಮ ಎಂದು ಭಾರತ ಭಾವಿಸುತ್ತದೆ ಎಂದು ಹೇಳಿದರು. ಖಂಡಿತವಾಗಿಯೂ ಭಾರತದ ದೃಷ್ಟಿಯಿಂದ, ನಾವು ಮಾತುಕತೆ ನಡೆಸಿ ಸಮನ್ವಯ ಸಾಧಿಸಿ ಪರಿಹಾರ ಕಂಡುಕೊಳ್ಳುವುದು ಉತ್ತಮ. ಇದು ಸ್ವಾಗತಾರ್ಹ ಬೆಳವಣಿಗೆ ಆಗಿದ್ದರೂ, ಈ ವಿಷಯದಲ್ಲಿ ನಿರಂತರ ಮಾತುಕತೆ ಮತ್ತು ಕೆಲಸ ನಡೆಯುತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಈ ರಾಜತಾಂತ್ರಿಕ ಕ್ರಮದ ಪ್ರಾಯೋಗಿಕ ಯಶಸ್ಸಿನ ಉದಾಹರಣೆಯಾಗಿ ಶಿವಾಲಿಕ್ ಮತ್ತು ನಂದಾ ದೇವಿ ಹಡಗುಗಳು ಬಂದಿಳಿದಿರುವುದನ್ನು ಅವರು ಉಲ್ಲೇಖಿಸಿದರು. ಈ ಟ್ಯಾಂಕರ್‌ಗಳು ಒಟ್ಟಾಗಿ ಸುಮಾರು 92,712 ಮೆಟ್ರಿಕ್ ಟನ್ ಎಲ್ ಪಿಜಿ ಸಾಗಿಸುತ್ತಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries