ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಾ.29ರಿಂದ ಏ.3ರ ವರೆಗೆ ಜರುಗಲಿದೆ. ಬ್ರಹ್ಮಶ್ರೀ ದೇಲಂಪಾಡಿ ಅನಿರುದ್ಧ ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಾ.29ರಂದು ಬೆಳಗ್ಗೆ 7.30ಕ್ಕೆ ಬೆಳಗ್ಗಿನ ಪೂಜೆ, 10ರಿಂದ ಗಣಪತಿ ಹೋಮ, ನಡೆಯಲ್ಲಿ ಸಾಮೂಹಿಕ ಪ್ರಾರ್ಥನೆ, ಶ್ರೀ ದೇವರ ರಾಜಾಂಗಣ ಪ್ರವೇಶ, ಧ್ವಜಾರೋಹಣ, ನವಕಾಭಿಷೇಕ, ತುಲಾಭಾರ ಸೇವೆ ನಡೆಯುವುದು.
ರಾತ್ರಿ 8ಕ್ಕೆ ಶ್ರೀದೇವರಬಲಿ, ಕಟ್ಟೆ ಪೂಜೆ, ಮಾ.30ರಂದು ಬೆಳಗ್ಗೆ 10ಕ್ಕೆ ಶ್ರೀ ಭೂತಬಲಿ, ದರ್ಶನಬಲಿ, ನವಕಾಭಿಷೇಕ, ರಾತ್ರಿ 8ಕ್ಕೆ ಶ್ರೀ ಭೂತಬಲಿ, ಕಟ್ಟೆ ಪೂಜೆ, ಮಾ.31ರಂದು ಬೆಳಗ್ಗೆ 7.30ಕ್ಕೆ ಬೆಳಗ್ಗಿನ ಪೂಜೆ, 10ಕ್ಕೆ ಶ್ರೀದೇವರಬಲಿ, ನವಕಾಭಿಷೇಕ, ರಾತ್ರಿ 8ಕ್ಕೆ ದೀಪೆÇೀತ್ಸವ, ಶ್ರೀ ಭೂತಬಲಿ, ಶ್ರೀದೇವರ ಪಡು ಭಾಗಕ್ಕೆ ಸವಾರಿ, ಕಟ್ಟೆ ಪೂಜೆ, ಏ.1ರಂದು ಬೆಳಗ್ಗೆ 7.30ಕ್ಕೆ ಬೆಳಗ್ಗಿನ ಪೂಜೆ, 10ಕ್ಕೆ ಶ್ರೀ ದೇವರ ಬಲಿ, ಅಯ್ಯಂಗಾಯಿ ದರ್ಶನಬಲಿ, ನವಕಾಭಿಷೇಕ, ರಾತ್ರಿ 9ಕ್ಕೆ ಶ್ರೀ ಭೂತಬಲಿ, ಕಟ್ಟೆ ಪೂಜೆ, ರಥೋತ್ಸವ, ಸುಡುಮದ್ದುಪ್ರದರ್ಶನ, ದರ್ಶನ, ಶಯನಬಲಿ ನಡೆಯುವುದು.
ಏ.2ರಂದು ಬೆಳಗ್ಗೆ ಕವಾಟೋದ್ಘಾಟನೆ, ಜಲದ್ರೋಣಿ ಪೂಜೆ, ಅಭಿಷೇಕ, ಹಣ್ಣುಕಾಯಿ ಸಮರ್ಪಣೆ, ಯಾತ್ರಾ ಹೋಮ, ಮಧ್ಯಾಹ್ನ 1.30ಕ್ಕೆ ಶ್ರೀ ದೇವರಬಲಿ, ಕಟ್ಟೆ ಪೂಜೆ, ಅವಭೃತ ಸ್ನಾನ, ದರ್ಶನಬಲಿ, ರಾಜಾಂಗಣದಲ್ಲಿ ಶ್ರೀಮುಡಿ ಗಂಧ ಪ್ರಸಾದ ವಿತರಣೆ, ಬಟ್ಟಲು ಕಾಣಿಕೆ ಅರ್ಪಣೆ, ಧ್ವಜಾವರೋಹಣ, ಮಂತ್ರಾಕ್ಷತೆ ನಡೆಯುವುದು. ಏ.3ರಂದು ಬೆಳಗ್ಗೆ 9ಕ್ಕೆ ಶ್ರೀ ವ್ಯಾಘ್ರ ದೈವ (ಪಿಲಿಚಾಮುಂಡಿ) ನೇಮ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಾ.31ರಂದು ಮಧ್ಯಾಹ್ನ 12.30ಕ್ಕೆ "ಯಕ್ಷಾಂತರಂಗ" ಸದಸ್ಯರಿಂದ "ಸಮರ ಸೌಗಂಧಿಕಾ" ಯಕ್ಷಗಾನ ತಾಳಮದ್ದಳೆ, ಏ.1ರಂದು ರಾತ್ರಿ 7.30 ರಿಂದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಹಾಗೂ ಮಹೇಶ್ವರೀ ಮಹಿಳಾ ಸಮಾಜ ಪ್ರಾಯೋಜಕತ್ವದಲ್ಲಿ ಇಂಚರ ಮೆಲೊಡೀಸ್ ಮಂಗಳೂರು ಅರ್ಪಿಸುವ ಇನಿದನಿ ಕಾರ್ಯಕ್ರಮ, ಏ. 2ರಂದು ಮಧ್ಯಾಹ್ನ 1.30ರಿಂದ ಶ್ರೀ ಶಾಸ್ತಾ ಮ್ಯೂಸಿಕಲ್ಸ್, ಪೆರ್ಲ ವತಿಯಿಂದ ಭಕ್ತಿಸಂಗೀತ ಕಾರ್ಯಕ್ರಮ ನಡೆಯಲಿದೆ.

