HEALTH TIPS

ಕಾಸರಗೋಡಿನ ಐದು ವಿಧಾನಸಭಾ ಕ್ಷೇತ್ರ-ಕಣದಲ್ಲಿ 32 ಮಂದಿ ಅಭ್ಯರ್ಥಿಗಳು

ಕಾಸರಗೋಡು: ವಿಧಾನಸಭಾ ಚುನಾವಣೆಗೆ ನಾಮಪತ್ರ ಹಿಂತೆಗೆಯುವ ದಿನಾಂಕ ಗುರುವಾರ ಕೊನೆಗೊಂಡಿದ್ದು,  ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 32 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.  


ಮಂಜೇಶ್ವರ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಹನ್ನೊಂದು ಮಂದಿ ಅಭ್ಯರ್ಥಿಗಳಿದ್ದರೆ,  ಕಾಂಞಂಗಾಡ್ ಕ್ಷೇತ್ರದಲ್ಲಿ ಅತಿ ಕಡಿಮೆ ನಾಲ್ಕು ಮಂದಿ ಅಭ್ಯರ್ಥಿಗಳಿದ್ದಾರೆ.   ಮಂಜೇಶ್ವರ ಕ್ಷೇತ್ರದಲ್ಲಿ ಎಸ್‍ಡಿಪಿಐ ಅಭ್ಯರ್ಥಿ ಕೆ.ಎಂ. ಅಶ್ರಫ್, ಸ್ವತಂತ್ರ ಅಭ್ಯರ್ಥಿಗಳಾದ ಮುಹಮ್ಮದ್ ರಫೀಕ್ ಮತ್ತು ಎನ್.ಕೇಶವ ನಾಯಕ್ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದಾರೆ.  ತ್ರಿಕರಿಪುರ ಕ್ಷೇತ್ರದಲ್ಲಿ ಟ್ವೆಂಟಿ-20 ಅಭ್ಯರ್ಥಿ ರಮಣಿ ಕೆ.ವಿ ಮತ್ತು ಕಾಸರಗೋಡು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಎಂ.ಎ. ಲತೀಫ್ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದಾರೆ. 

ತ್ರಿಕರಿಪುರ ಕ್ಷೇತ್ರದಲ್ಲಿ  ಡಾ. ವಿ.ಪಿ.ಪಿ. ಮುಸ್ತಫಾ(ಸಿಪಿಐ-ಎಂ), ಸಂದೀಪ್ ವಾರಿಯರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಎಂ. ಬಾಲರಾಜ್(ಬಿಜೆಪಿ), ವಿಜಯಕುಮಾರ್ ಬಿ(ಬಹುಜನ ಸಮಾಜ ಪಕ್ಷ), ಕಾಞಂಗಾಡು ಕ್ಷೇತ್ರದಲ್ಲಿ ನಾಲ್ವರು ಅಭ್ಯರ್ಥಿಗಳಿದ್ದು, ವಕೀಲ ಗೋವಿಂದನ್ ಪಳ್ಳಿಕ್ಕಾಪ್ಪಿಲ್(ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಸಿಪಿಐ), ಶೈಜಿ ಒಟ್ಟಪಲ್ಲಿ(ಕೇರಳ ಕಾಂಗ್ರೆಸ್), ಎಂ. ಬಾಲರಾಜ್(ಬಿಜೆಪಿ), ವಿಜಯ್‍ಕುಮಾರ್ ಬಿ(ಬಿಎಸ್‍ಪಿ) ಅಭ್ಯರ್ಥಿಗಳಾಗಿದ್ದಾರೆ.

ಉದುಮ ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಸಹಿತ ಆರು ಮಂದಿ ಅಭ್ಯರ್ಥಿಗಳಿದ್ದಾರೆ. ವಕೀಲ ಸಿ.ಎಚ್.ಕುಞಂಬು(ಸಿಪಿಐಎಂ), ಕೆ. ನೀಲಕಂಠನ್-ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಮನುಲಾಲ್. ಎಂ(ಬಿಜೆಪಿ)ಹಾಗೂ ಮೂವರು ಪಕ್ಷೇತರ ಅಭ್ಯರ್ಥಿಗಳಿದ್ದಾರೆ.

ಕಾಸರಗೋಡು ಕ್ಷೇತ್ರದಲ್ಲಿ ಐವರು ಅಭ್ಯರ್ಥಿಗಳಿದ್ದು, ಅಶ್ವಿನಿ ಎಂ.ಎಲ್(ಬಿಜೆಪಿ), ಕಲ್ಲಟ್ರ ಮಾಹಿನ್(ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್) ಹಾಗೂ ಇತರ ಮೂವರು ಪಕ್ಷೇತ್ರ ಅಭ್ಯರ್ಥಿಗಳಿದ್ದಾರೆ. ಮಂಜೇಶ್ವರಂ ಕ್ಷೇತ್ರದಲ್ಲಿ ಒಟ್ಟು 11 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎ.ಕೆ.ಎಂ. ಅಶ್ರಫ್(ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್), ಕೆ.ಆರ್. ಜಯಾನಂದ(ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ಸ್ರ್ವಾದಿ), ಸಂಜೀವ(ಬಿಎಸ್‍ಪಿ), ಕೆ. ಸುರೇಂದ್ರನ್(ಬಿಜೆಪಿ) ಹಾಗೂ ಇತರ ಏಳು ಮಂದಿ ಪಕ್ಷೇತರರು ಕಣದಲ್ಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries