ಕಾಸರಗೋಡು: ಅತೀ ಪುರಾತನ, ದೇವೀ ಚೈತನ್ಯದಿಂದ ಭಕ್ತಜನರ ವಿಶ್ವಾಸ ಕೇಂದ್ರವಾಗಿ ಖ್ಯಾತಿಗಳಿಸಿರುವ ಆರಿಕ್ಕಾಡಿ ಪಾರೆಸ್ಥಾನ ಶ್ರೀ ಆಲಿಚಾಮುಂಡಿ ಕ್ಷೇತ್ರದ ವಾರ್ಷಿಕ ಕಳಿಯಾಟ ಮಹೋತ್ಸವ ಮಾ 30ರಿಂದ ಏ. 6ರ ವರೆಗೆ ಜರುಗಲಿದೆ. ಮುಸ್ಲಿಂ ಸಮುದಾಯ ಸೇರಿದಂತೆ ಎಲ್ಲಾ ಧರ್ಮದವರೂ ಪಾರೆಸ್ಥಾನ ಕಳಿಯಾಟ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಸರ್ವಧರ್ಮ ಸಮನ್ವಯದ ತಾಣವಾಗಿ ಬೆಳೆದುಬರುತ್ತಿರುವುದಾಗಿ ತೀಯ ಮಹಾಸಭಾ ರಾಜ್ಯಾಧ್ಯಕ್ಷ ಗಣೇಶ ಅರೆಮಂಗಾನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾ. 30ರಂದು ರಾತ್ರಿ ಭಂಡಾರದ ಮನೆಯಿಂದ ಕ್ಷೇತ್ರ ಸ್ಥಾನಿಕರೊಂದಿಗೆ ವಾದ್ಯಘೋಷಗಳೊಂದಿಗೆ ಭಂಡಾರ ಕ್ಷೇತ್ರಕ್ಕೆ ಆಘಮಿಸಲಿದೆ. 31ರಂದು ಬೆಳಗ್ಗೆ 5ಕ್ಕೆ ಕಳಿಯಾಟ ಮಹೋತ್ಸವಕ್ಕೆ ಧ್ವಜಾರೋಹಣ , ನಂತರ ಭಜನೆ, ಸಂಜೆ 6ಕ್ಕೆ ದೈವಗಳ ವೆಳ್ಳಾಟ ನಡೆಯುವುದು.
ಏ. 1ರಂದು ಸಂಜೆ 7ಕ್ಕೆ ದೈವಗಳ ವೆಳ್ಳಾಟ, ಏ. 2ರಂದು ಬೆಳಗ್ಗೆ 8ಕ್ಕೆ ಮೊದಲ ಕಳಿಯಾಟ ಅಂಗವಗಿ ವೀರಪುತ್ರನ್, ಮಲಯಾಳ ಚಾಮುಮಡಿ, ಸಂಜೆ 4ಕ್ಕೆ ಭಗವತೀ ದರ್ಶಮ ಸಸಂಜೆ 7ಕ್ಕೆ ವಿವಿಧ ದೈವಗಳ ವೆಳ್ಳಾಟ, ರಾತ್ರಿ 8ಕ್ಕೆ ಆರಿಕ್ಕಾಡಿ ಶ್ರೀನಾರಾಯಣಗುರು ವನಿತಾ ಸ್ವಸಹಾಯ ಸಂಘ ನೇತೃತ್ವದಲ್ಲಿ ನೃತ್ಯ ಕಾರ್ಯಕ್ರಮ ನಡೆಯುವುದು.
3ರಂದು ನಡು ಕಳಿಯಾಟ ಅಂಗವಾಗಿ ಬೆಳಗ್ಗೆ 8ಕ್ಕೆ ಕರಿಮುರುಗನ್, ಕರಿವಿಲ್ಲು ದೈವ ಕೋಲ, ವೀರಪುತ್ರನ್, ವೇಟಮುರುಗನ್, ಮಲಯಾಳಂ ಚಾಂಉಂಡಿ ದೈವಗಳ ಕೋಲ ನಡೆಯುವುದು.4ರಂದು ಬೆಳಗ್ಗೆ 6ಕ್ಕೆ ಆಲಿ ಭೂತ, ಭಗವತೀ ದರ್ಶನ, ಬಿಂಬ ದರ್ಶನ, ವಿವಿಧ ಉಪ ದೈವಗಳ ಕೋಲ ನಡೆಯುವುದು. 5ರಂದು ಬೆಳಗ್ಗೆ 6ಕ್ಕೆ ಪೀಯಾಯಿ, ಆಲಿಭೂತ, ಮಲಯಾಳ ಚಾಮುಂಡಿ, ವೇಟಮುರುಗನ್ ದೈವದ ಕೋಲ ನಡೆಯುವುದು.
6ರಂದು ಬೆಳಗ್ಗೆ 6.30ಕ್ಕೆ ಆಲಿಭೂತ, ಮಲಯಾಳ ಚಾಮುಂಡಿ, ಭಗವತೀ ದರ್ಶನ, ಕೆಂಡಸೇವೆ, ಬಿಂಬದರ್ಶನ, ಪಾಡರ್ ಕುಳಂಙರ ಭಗವತಿ ಹೂಮುಡಿ ಉತ್ಸವ, ಮಂತ್ರಮೂರ್ತಿ, ಆಲಿಭೂತ ಕಲಶ ಪ್ರಕ್ಷಿಣೆ, ಸಂಜೆ 6.30ಕ್ಕೆ ಧ್ವಜಾವರೋಹಣ ನಡೆಯುವುದು. ರಾತ್ರಿ 10ಕ್ಕೆ ಭಂಡಾರದ ನಿರ್ಗಮನವಾಗುವುದಾಗಿ ತಿಳಿಸಿದರು.
ಕ್ಷೇತ್ರದ ಫಿಟ್‍ಪರ್ಸನ್ ಜಗದೀಶ್ ಪ್ರಸಾದ್ ಕೂಡ್ಲು, ಉತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಂಬಳೆ, ಕಾರ್ಯದರ್ಶಿ ದೀಪಕ್ ಕಾರ್ಲೆ, ಕೋಶಾಧಿಕಾರಿ ನವೀನ್ಕುಮಾರ್ ಪಳ್ಳಂ ಉಪಸ್ಥಿತರಿದ್ದರು.

