ಮಂಜೇಶ್ವರ: ಮಜಿಬೈಲ್ ಜಂಕ್ಷನ್ ಬಳಿ ಮದ್ಯಪಾನಿಯೊಬ್ಬ ಚಲಾಯಿಸಿದ ಕಾರು ನಿಲ್ಲಿಸಿದ್ದ ಸ್ಕೂಟರ್‍ಗೆ ಡಿಕ್ಕಿಯಾಗಿ ಸವಾರ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಮಜಿಬೈಲ್ ನಿವಾಸಿಗಳಾದ ದಯಾನಂದ, ಕೃಷ್ಣ ಕುಮಾರ್ ಹಾಗೂ ಸುಧಾಕರ ಗಾಯಾಳುಗಳು. ಇವರಲ್ಲಿ ದಯಾನಂದ ಅವರನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಇತರ ಇಬ್ಬರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡರು. ಕಾರು ಚಲಾಯಿಸಿದ ಶಿರಂತಡ್ಕ ಚಿಪ್ಪಾರು ಅಮ್ಮೇರಿ ನಿವಾಸಿ ಶಹಾದ್ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ದಯಾನಂದ ಅವರು ರಸ್ತೆಬದಿ ಸ್ಕೂಟರ್ ನಿಲ್ಲಿಸಿ ಕೃಷ್ಣಕುಮಾರ್ ಹಾಗೂ ದಯಾನಂದ ಅವರ ಜತೆ ಮಾತನಾಡುತ್ತಿದ್ದ ಸಂದರ್ಭ ಹೊಸಂಗಡಿ ಭಾಗದಿಂದ ಏಕಾಏಕಿ ಆಗಮಿಸಿದ ಕಾರು ಇವರಿಗೆ ಡಿಕ್ಕಿ ಹೊಡೆದಿತ್ತು. ಚಾಲಕನನ್ನು ತಪಾಸಣೆಗೊಳಪಡಿಸಿದಾಗ ಈತ ಅಮಲು ಪದಾರ್ಥ ಸೇವಿಸಿರುವುದು ಖಚಿತಗೊಂಡಿತ್ತು.

