HEALTH TIPS

ಯೂಟ್ಯೂಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ 3 ಕೋಟಿ ಸಬ್‌ಸ್ಕ್ರೈಬರ್ಸ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಯೂಟ್ಯೂಬ್‌ ಚಾನೆಲ್‌ನ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ಮೂರು ಕೋಟಿಯ ಗಡಿ ದಾಟಿದೆ.

ಈ ಮೂಲಕ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ವಿಶ್ವದ ಅಗ್ರ ನಾಯಕ ಸ್ಥಾನದಲ್ಲಿ ಮೋದಿ ಮುಂದುವರಿದಿದ್ದಾರೆ.

ಮೋದಿ ಅವರ ನಂತರದ ಸ್ಥಾನದಲ್ಲಿ ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈಲ್‌ ಬೊಲ್ಸೊನಾರೊ ಅವರಿದ್ದಾರೆ.

ಆದರೆ, ಅವರ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯು ಮೋದಿ ಅವರ ಅನುಯಾಯಿಗಳ ಸಂಖ್ಯೆಯ ನಾಲ್ಕನೇ ಒಂದು ಭಾಗದಷ್ಟು ಮಾತ್ರ ಇದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಬ್‌ಸ್ಕ್ರೈಬರ್‌ಗಳಿಗಿಂತಲೂ ಏಳು ಪಟ್ಟು ಹೆಚ್ಚು ಅನುಯಾಯಿಗಳನ್ನು ಮೋದಿ ಹೊಂದಿದ್ದಾರೆ. ಇದು ವಿಶ್ವದಾದ್ಯಂತ ಡಿಜಿಟಲ್‌ ವೇದಿಕೆಗಳ ಮೂಲಕ ಮೋದಿ ಅವರು ಗಣನೀಯವಾಗಿ ಜನರನ್ನು ತಲುಪಿರುವ ಪ್ರಮಾಣದ ಬಗ್ಗೆ ಬೆಳಕು ಚೆಲ್ಲುತ್ತದೆ. ಭಾರತದಲ್ಲಿಯೂ ಇತರೆ ನಾಯಕರಿಗಿಂತಲೂ ಹೆಚ್ಚಿನ ಅನುಯಾಯಿಗಳನ್ನು ಮೋದಿ ಹೊಂದಿದ್ದಾರೆ ಎಂಬುದು ಗಮನಾರ್ಹ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗಿಂತ ಮೂರು ಪಟ್ಟು ಹೆಚ್ಚು ಮಾತ್ರವಲ್ಲದೇ, ಆಮ್‌ ಆದ್ಮಿ ‍ಪಕ್ಷ ಹಾಗೂ ಕಾಂಗ್ರೆಸ್‌ ಪಕ್ಷಗಳು ಪ್ರತ್ಯೇಕವಾಗಿ ಯೂಟ್ಯೂಬ್‌ನಲ್ಲಿ ಹೊಂದಿರುವ ಸಬ್‌ಸ್ಕ್ರೈಬರ್‌ಗಳಿಗಿಂತಲೂ ನಾಲ್ಕು ಪಟ್ಟು ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಮೋದಿ ಹೊಂದಿದ್ದಾರೆ.

ಇನ್ನು ಕಳೆದತಿಂಗಳಷ್ಟೇ ಇನ್‌ಸ್ಟಾಗ್ರಾಂನಲ್ಲಿಯೂ ಮೋದಿ ಅವರ ಫಾಲೋವರ್ಸ್‌ಗಳ ಸಂಖ್ಯೆ ಹತ್ತು ಕೋಟಿಯ ಗಡಿ ದಾಟಿದೆ. ಈ ವೇದಿಕೆಯಲ್ಲಿ ಇಷ್ಟು ಪ್ರಮಾಣದ ಫಾಲೋವರ್ಸ್‌ಗಳನ್ನು ಹೊಂದಿದೆ ವಿಶ್ವದ ಮೊದಲ ರಾಜಕಾರಣಿ, ನಾಯಕ ಎಂಬ ಹಗ್ಗೆಳಿಕೆಗೂ ಮೋದಿ ಪಾತ್ರರಾಗಿದ್ದರು.ಮೋದಿ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದು 2014ರಲ್ಲಿ ಎಂಬುದು ಗಮನಾರ್ಹ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries