HEALTH TIPS

ದೇಶಾದ್ಯಂತ ನಾಪತ್ತೆಯಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ; 5 ರಾಜ್ಯಗಳಿಂದ ವರದಿ ಕೇಳಿದ NHRC

ನವದೆಹಲಿ: ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ನಾಪತ್ತೆಯಾಗುತ್ತಿರುವವರ ಸಂಖ್ಯೆಯು ಹೆಚ್ಚುತ್ತಿದೆ ಹಾಗೂ ಅವರನ್ನು ಪತ್ತೆಹಚ್ಚುವ ದರ ಕ್ಷೀಣಿಸುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಸ್ವಯಂಪ್ರೇರಿತವಾಗಿ ಪರಿಗಣಿಸಿದೆ.

ಆಯೋಗವು ಬಿಹಾರ, ಒಡಿಶಾ, ತೆಲಂಗಾಣ, ಮಹಾರಾಷ್ಟ್ರ ಮತ್ತು ರಾಜಸ್ಥಾನ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ಗಳನ್ನು ಜಾರಿಗೊಳಿಸಿ, ಈ ವಿಷಯದ ಕುರಿತು ಎರಡು ವಾರಗಳೊಳಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದೆ.

ವರದಿಗಳ ಪ್ರಕಾರ, ಬಿಹಾರದಲ್ಲಿ 2013ರ ಬಳಿಕ ಪ್ರತಿ ವರ್ಷ 12,000ರಿಂದ 14,000 ಮಂದಿ ನಾಪತ್ತೆಯಾಗುತ್ತಿರುವುದು ದಾಖಲಾಗಿದೆ. ಈ ಪೈಕಿ ಹೆಚ್ಚಿನವರು ಮಕ್ಕಳು. ಆದರೆ, ನಾಪತ್ತೆಯಾದ ಮಕ್ಕಳ ಪೈಕಿ ಕೇವಲ ಮೂರನೇ ಎರಡರಷ್ಟು ಮಂದಿ ಮಾತ್ರ ಪತ್ತೆಯಾಗುತ್ತಿದ್ದಾರೆ. ಪತ್ತೆಯಾಗದ ಮಕ್ಕಳ ಸುರಕ್ಷತೆ ಮತ್ತು ಸಂಭವನೀಯ ಶೋಷಣೆಯ ಬಗ್ಗೆ ಮಾಧ್ಯಮ ವರದಿಗಳು ಕಳವಳ ವ್ಯಕ್ತಪಡಿಸಿವೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)ದಿಂದ ಅಂಕಿಅಂಶಗಳನ್ನು ಪಡೆದಿರುವ ಆಯೋಗವು, ಒಡಿಶಾ, ಬಿಹಾರ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಮಾನವ ಕಳ್ಳಸಾಗಣೆ ನಡೆಯುತ್ತಿರುವುದರತ್ತ ಬೆಟ್ಟು ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries