ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ ಅವರು ತೃತೀಯ ಲಿಂಗಿ ವ್ಯಕ್ತಿಗಳ (ಸಂರಕ್ಷಣೆಯ ಹಕ್ಕುಗಳು) ತಿದ್ದುಪಡಿ ಮಸೂದೆಯನ್ನು ಮಂಡಿಸಿದರು.
ಪ್ರಸ್ತುತ ಕಾನೂನಿನಡಿ ಒದಗಿಸಲಾಗಿರುವ ರಕ್ಷಣೆ ಮತ್ತು ಪ್ರಯೋಜನಗಳು ವ್ಯಾಪಕ ಸ್ವರೂಪದ್ದಾಗಿವೆ. ಇವು ತಲುಪಲೇಬೇಕಿರುವ ತೃತೀಯ ಲಿಂಗಿ ವ್ಯಕ್ತಿಗಳನ್ನು ಸೂಕ್ತವಾಗಿ ಮತ್ತು ಖಚಿತವಾಗಿ ಗುರುತಿಸುವಿಕೆಗಾಗಿ ಹಾಗೂ ಅವರ ಸಂರಕ್ಷಣೆಗಾಗಿ ಈ ಪದಕ್ಕೆ ನಿಖರವಾದ ವ್ಯಾಖ್ಯಾನವನ್ನು ನೀಡುವುದು ಅನಿವಾರ್ಯವಾಗಿದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.
ಮಸೂದೆಯು ಅಗತ್ಯವಿದ್ದರೆ ತಜ್ಞರ ಸಲಹೆ ಪಡೆಯುವ ಆಯ್ಕೆಯೊಂದಿಗೆ ಪ್ರಾಧಿಕಾರ ನೇಮಕಕ್ಕೆ ನಿಬಂಧನೆಗಳನ್ನೂ ಒಳಗೊಂಡಿದೆ.
ಕರಡು ಶಾಸನವು ತಮ್ಮ ಅಧಿಕೃತ ದಾಖಲೆಗಳಲ್ಲಿ ಅಗತ್ಯ ಸೂಕ್ತ ಬದಲಾವಣೆಗಳನ್ನು ಮಾಡಲು ತೃತೀಯ ಲಿಂಗಿಗಳಿಗೆ ಅಧಿಕಾರವನ್ನು ನೀಡಲೂ ಉದ್ದೇಶಿಸಿದೆ.

