HEALTH TIPS

ಲೆಬನಾನ್ ನಲ್ಲಿ 7 ದಿನಗಳಲ್ಲಿ 83 ಮಕ್ಕಳು ಮೃತ್ಯು: ಯುನಿಸೆಫ್ ಕಳವಳ

ಬೈರುತ್: ಇಸ್ರೇಲ್ ಹಾಗೂ ಹಿಜ್ಬೊಲ್ಲಾ ನಡುವಿನ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮಾರ್ಚ್ 2ರಿಂದ ಲೆಬನಾನ್ ನಲ್ಲಿ ಕನಿಷ್ಠ 83 ಮಕ್ಕಳು ಮೃತಪಟ್ಟಿದ್ದು, 254 ಮಕ್ಕಳು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ತಿಳಿಸಿದೆ ಎಂದು Aljazeera ವರದಿ ಮಾಡಿದೆ.

ಸೋಮವಾರ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಕಳೆದ ಒಂದು ವಾರದಲ್ಲಿ ಲೆಬನಾನ್‌ ನಾದ್ಯಂತ ಪ್ರತಿದಿನ ಸರಾಸರಿ 10ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪುತ್ತಿದ್ದು, ಪ್ರತಿದಿನ ಸುಮಾರು 36 ಮಕ್ಕಳು ಗಾಯಗೊಳ್ಳುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಕಳೆದ 28 ತಿಂಗಳುಗಳಲ್ಲಿ ಲೆಬನಾನ್ ನಲ್ಲಿ ಒಟ್ಟು 329 ಮಕ್ಕಳು ಸಾವನ್ನಪ್ಪಿದ್ದು, 1,632 ಮಕ್ಕಳು ಗಾಯಗೊಂಡಿದ್ದಾರೆ ಎಂದು ಯುನಿಸೆಫ್ ಹೇಳಿದೆ.

'ಈ ಅಂಕಿಅಂಶಗಳು ದಿಗ್ಭ್ರಮೆಗೊಳಿಸುವಂತಿವೆ. ನಡೆಯುತ್ತಿರುವ ಸಂಘರ್ಷವು ಮಕ್ಕಳ ಮೇಲೆ ಬೀರುತ್ತಿರುವ ಪರಿಣಾಮಕ್ಕೆ ಇದು ಸ್ಪಷ್ಟ ಸಾಕ್ಷಿಯಾಗಿದೆ' ಎಂದು ಯುನಿಸೆಫ್ ಕಳವಳ ವ್ಯಕ್ತಪಡಿಸಿದೆ.

ಸಂಘರ್ಷದ ಪರಿಣಾಮವಾಗಿ ದೇಶದಾದ್ಯಂತ ಭಾರೀ ಪ್ರಮಾಣದ ಸ್ಥಳಾಂತರ ಸಂಭವಿಸಿದ್ದು, ಸುಮಾರು 7 ಲಕ್ಷ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಇವರಲ್ಲಿ ಸುಮಾರು 2 ಲಕ್ಷ ಮಕ್ಕಳು ಸೇರಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ. ಹಿಂದಿನ ಹಿಂಸಾಚಾರದ ಉಲ್ಬಣಗಳಿಂದಲೇ ಸಾವಿರಾರು ಜನರು ಈಗಾಗಲೇ ಸ್ಥಳಾಂತರಗೊಂಡಿದ್ದರು ಎಂದು ಹೇಳಿದೆ.

ಶಾಲೆಗಳು ಮತ್ತು ಆಶ್ರಯ ಕೇಂದ್ರಗಳು ಸೇರಿದಂತೆ ನಾಗರಿಕರು ಹಾಗೂ ನಾಗರಿಕ ಮೂಲಸೌಕರ್ಯಗಳನ್ನು ರಕ್ಷಿಸಲು ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳಡಿ ಇರುವ ಬಾಧ್ಯತೆಗಳನ್ನು ಪಾಲಿಸಲು ಉಭಯ ಪಕ್ಷಗಳಿಗೂ ಯುನಿಸೆಫ್ ಕರೆ ನೀಡಿದೆ.

ಮಕ್ಕಳಿಗೆ ಮತ್ತಷ್ಟು ಹಾನಿಯಾಗದಂತೆ ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಯುನಿಸೆಫ್ ಆಗ್ರಹಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries