HEALTH TIPS

ಪ್ಯಾರಾಸಿಟಮಾಲ್ ಸೇರಿದಂತೆ ಅನುಮೋದಿತವಲ್ಲದ 90 ಎಫ್‌ಡಿಸಿ ಔಷಧಿ ಸ್ಯಾಂಪಲ್‌ಗಳು ಪತ್ತೆ; ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಡಿಸಿಜಿಐ ಸೂಚನೆ

ನವದೆಹಲಿ: ಭಾರತೀಯ ಔಷಧಿ ಮಹಾ ನಿಯಂತ್ರಕವು (ಡಿಜಿಸಿಐ) ಅನುಮೋದನೆ ಪಡೆದಿರದ ಸ್ಥಿರ ಡೋಸ್ ಸಂಯೋಜನೆಯ ಔಷಧಿಗಳ (ಎಫ್‌ಡಿಸಿ) ವಿರುದ್ಧ ರಾಷ್ಟ್ರವ್ಯಾಪಿ ದಾಳಿಗಳನ್ನು ನಡೆಸುತ್ತಿದೆ. ಜೆನೆರಿಕ್ ಹೆಸರಿನಲ್ಲಿರುವ 90 ಎಫ್‌ಡಿಸಿಗಳಿಗೆ ಆಯಾ ಔಷಧಿ ನಿಯಂತ್ರಕರು ಅನುಮೋದನೆ ನೀಡಿದ್ದಾರೆಯೇ ಎನ್ನುವುದನ್ನು ಪರಿಶೀಲಿಸುವಂತೆ ಡಿಜಿಸಿಐ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಮಲ್ಟಿ ವಿಟಾಮಿನ್‌ಗಳು,ಫಾಲಿಕ್ ಆಯಸಿಡ್‌ಗಳು,ಸಿರಪ್‌ಗಳು, ಪ್ಯಾರಾಸಿಟಮಾಲ್,ಕ್ಲೋಟ್ರಿಮಜೋಲ್ ಮತ್ತು ಬೀಟಾಮೆಥಾಸೋನ್ ಕ್ರೀಮ್,ಡೈಕ್ಲೋಫೆನಾಕ್ ಪೊಟ್ಯಾಷಿಯಂ ಮತ್ತು ಡೈಸೈಕ್ಲೋಮೈನ್ ಹೈಡ್ರೋಕ್ಲೋರೈಡ್ ಮಾತ್ರೆ ಇತ್ಯಾದಿಗಳು ಇವುಗಳಲ್ಲಿ ಸೇರಿವೆ.

2025ನೇ ಸಾಲಿನ ಸುಗಮ್ ಲ್ಯಾಬ್ ಪರೀಕ್ಷಾ ವರದಿಯಲ್ಲಿ ಭಾರೀ ಸಂಖ್ಯೆಯ ಔಷಧಿ ಸ್ಯಾಂಪಲ್‌ಗಳು (ಎಫ್‌ಡಿಸಿಗಳು) ಅನುಮೋದಿತವಲ್ಲ ಮತ್ತು 'ಹೊಸ ಔಷಧಿ' ವರ್ಗದಡಿ ಬರುತ್ತವೆ ಎನ್ನುವುದನ್ನು ಪತ್ತೆ ಹಚ್ಚಲಾಗಿದೆ. ಹೊಸ ಔಷಧಿಗಳು ಮತ್ತು ಕ್ಲಿನಿಕಲ್ ಟ್ರಯಲ್ ನಿಯಮಗಳು, 2019ರಡಿ ಪರವಾನಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಡದ ಹೊರತು ಯಾವುದೇ ಹೊಸ ಔಷಧಿಯನ್ನು ಮಾರಾಟಕ್ಕಾಗಿ ತಯಾರಿಸುವಂತಿಲ್ಲ ಎಂದು ಡಿಜಿಸಿಐ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಪೂರೈಕೆ ಸರಪಳಿಯಲ್ಲಿ ಅನುಮೋದಿಸಲ್ಪಡದ ಔಷಧಿಗಳ ಉಪಸ್ಥಿತಿಯು ಗಂಭೀರ ಕಳವಳಕಾರಿ ವಿಷಯವಾಗಿದ್ದು,ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗೆ ಅಪಾಯವನ್ನುಂಟು ಮಾಡಬಹುದು. 1940ರ ಔಷಧಿಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆಯ ನಿಬಂಧನೆಗಳನ್ನೂ ಪಾಲಿಸಲಾಗಿಲ್ಲ ಎನ್ನುವುದನ್ನು ವರದಿಯು ಸೂಚಿಸಿದೆ ಎಂದು ತಿಳಿಸಿರುವ ಪತ್ರವು, ಇಂತಹ ಅನುಮೋದಿಸಲ್ಪಡದ ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries