ಮುಂಬೈ,: ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ವೇಗವಾಗಿ ಕುಸಿಯುತ್ತಾ ಸಾಗುತ್ತಿದೆ. ಶುಕ್ರವಾರ ಹಿಂದಿನ ದಿನದ ಬೆಲೆಗಿಂತ 30 ಪೈಸೆ ಕುಸಿದು 94.28ರಲ್ಲಿ ನೆಲೆಗೊಂಡಿದೆ.
ಯುದ್ಧವಿರಾಮದ ಬಗ್ಗೆ ಇರಾನ್‌ನೊಂದಿಗೆ ಅಮೆರಿಕ ನಡೆಸುತ್ತಿದೆ ಎನ್ನಲಾದ ಮಾತುಕತೆಗಳ ಬಗ್ಗೆ ಇನ್ನೂ ಸ್ಪಷ್ಟತೆ ಮೂಡದಿರುವ ಹಿನ್ನೆಲೆಯಲ್ಲಿ ಆಮದುದಾರರು ಯಾವುದೇ ಅಪಾಯವನ್ನು ತಂದುಕೊಳ್ಳಲು ಬಯಸದೆ ಡಾಲರನ್ನೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿರುವುದು ರೂಪಾಯಿ ಪಾತಾಳಕ್ಕಿಳಿಯಲು ಮುಖ್ಯ ಕಾರಣವಾಗಿದೆ.
ಮಾತುಕತೆಗಳ ಪ್ರಸ್ತಾಪವು ಕಚ್ಚಾತೈಲ ಬೆಲೆಯ ಹೆಚ್ಚಳವನ್ನು ತಡೆಹಿಡಿದಿದೆಯಾದರೂ, ಅದು ಈಗಲೂ ಬ್ಯಾರಲ್‌ಗೆ 100 ಡಾಲರ್‌ಗಿಂತಲೂ ಮೇಲೆಯೇ ಇದೆ.
ಇರಾನ್ ಯುದ್ಧ ಆರಂಭಗೊಂಡಂದಿನಿಂದ ರೂಪಾಯಿ ಮೌಲ್ಯ 4 ಶೇಕಡಕ್ಕೂ ಹೆಚ್ಚು ಕುಸಿದಿದೆ. ಯುದ್ಧ ನಿಲ್ಲುವ ಸೂಚನೆ ಇನ್ನೂ ಕಾಣುತ್ತಿಲ್ಲ.

