'ಬಾಲ್ಯಕ್ಕೆ ನಿವೃತ್ತಿ ಹೊಂದಬಾರದು'(Bachpana Shouldn't Retire)ಎಂಬ ವಿಷಯದ ಕುರಿತು ಹೃತ್ಪೂರ್ವಕ ಮತ್ತು ಸ್ಪೂರ್ತಿದಾಯಕ ಸಂಭಾಷಣೆಯಲ್ಲಿ ಧೋನಿ ತೊಡಗಿದರು ಎಂದು ಸಂಸ್ಥೆ ತಿಳಿಸಿದೆ.
'Bachpana Shouldn't Retire' ಎಂಬುದು ಮೆರಿಲ್ ಸಂಸ್ಥೆಯ ರಾಷ್ಟ್ರವ್ಯಾಪಿ ಸಾರ್ವಜನಿಕ ಆರೋಗ್ಯ ಆಂದೋಲನವಾದ 'ಟ್ರೀಟ್‌ಮೆಂಟ್ ಜರೂರಿ ಹೈ'ನ ಭಾಗವಾಗಿದೆ. ಇದನ್ನು ಸಕಾಲಿಕ ರೋಗನಿರ್ಣಯ ಮತ್ತು ಸುಧಾರಿತ ವೈದ್ಯಕೀಯ ಚಿಕಿತ್ಸೆಗಳಿಗೆ ಪ್ರವೇಶದ ಬಗ್ಗೆ ಜಾಗೃತಿ ಮೂಡಿಸಲು ಸಂಸ್ಥೆ ಆರಂಭಿಸಿದೆ.
'ಟ್ರೀಟ್‌ಮೆಂಟ್ ಜರೂರಿ ಹೈ'ಆಂದೋಲನದಡಿ ಹಿರಿಯ ನಾಗರಿಕರಿಗೆ ಜಾಗೃತಿ, ಆರೋಗ್ಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ 'ಟ್ರೀಟ್‌ಮೆಂಟ್ ಜರೂರಿ ಹೈ' ಎಂಬ ಉಪಕ್ರಮವನ್ನು ಸಂಸ್ಥೆ ಆರಂಭಿಸಿದೆ.
ಆರಂಭದಲ್ಲೇ ರೋಗ ಪತ್ತೆ, ರೋಗ ತಡೆಗಟ್ಟುವ ತಪಾಸಣೆ ಮತ್ತು ನವೀನ ಚಿಕಿತ್ಸಾ ಆಯ್ಕೆಗಳ ಮೂಲಕ ಹೃದಯ, ಮೂಳೆಚಿಕಿತ್ಸೆ ಮತ್ತು ಇತರ ವಯೀ ಸಂಬಂಧಿ ಪರಿಸ್ಥಿತಿಗಳಲ್ಲಿ ಫಲಿತಾಂಶಗಳನ್ನು ಗಮನಾರ್ಹವಾಗಿ ಸುಧಾರಿಸಬಹುದು ಎಂದು ಸಂಸ್ತೆ ತಿಳಿಸಿದೆ.
ಈ ಅಭಿಯಾನವು ಸರಳವಾದರೂ ಪ್ರಬಲವಾದ ಭರವಸೆಯನ್ನು ಪ್ರತಿಪಾದಿಸುತ್ತದೆ. ವಯಸ್ಸು ಹೆಚ್ಚಾದರೂ, ತಮಾಷೆ, ಕುತೂಹಲ ಮತ್ತು ಸಂತೋಷದ ಮನೋಭಾವವು ಎಂದಿಗೂ ಮಸುಕಾಗಬಾರದು. ಜೀವನದ ಪ್ರತಿಯೊಂದು ಹಂತದಲ್ಲೂ ಘನತೆ ಮತ್ತು ಉತ್ಸಾಹವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಈ ಸಂವಾದವು ಎತ್ತಿ ತೋರಿಸಿತು ಎಂದು ಸಂಸ್ತೆ ಹೇಳಿದೆ. ವಿಶೇಷವಾಗಿ ಭಾರತವು ತನ್ನ ವೃದ್ಧ ಜನಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವ ಸಂದರ್ಭದಲ್ಲಿ ಇಂತಹ ಉಪಕ್ರಮವು ಅತ್ಯಂತ ಪ್ರಯೋಜನಕಾರಿ ಎಂದಿದೆ.
ಅಭಿಯಾನದ ಆಳವಾದ ಉದ್ದೇಶದ ಕುರಿತು ಮಾತನಾಡಿದ ಎಂ.ಎಸ್. ಧೋನಿ,'ನಿಮಗಾಗಿ ಮತ್ತು ನಿಮ್ಮನ್ನು ಪ್ರೀತಿಸುವ ಜನರಿಗಾಗಿ ಆರೋಗ್ಯ ನೋಡಿಕೊಳ್ಳುವುದು ನೀವು ಮಾಡಬಹುದಾದ ಪ್ರಮುಖ ಕೆಲಸಗಳಲ್ಲಿ ಒಂದಾಗಿದೆ ಎಂದು ನಾನು ಯಾವಾಗಲೂ ನಂಬಿದ್ದೇನೆ. ನಮ್ಮ ಪೋಷಕರು ಮತ್ತು ಅಜ್ಜ, ಅಜ್ಜಿಯರಿಗೆ ಅರ್ಹವಾದ ಕಾಳಜಿ, ಗಮನ ಮತ್ತು ಬೆಂಬಲ ಸಿಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಟ್ರೀಟ್ಮೆಂಟ್ ಜರೂರಿ ಹೈ ನಂತಹ ಉಪಕ್ರಮವು ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ. ನಾನು ಇದರ ಭಾಗವಾಗಿದ್ದಕ್ಕೆ ಸಂತೋಷವಾಗಿದೆ'ಎಂದು ಒತ್ತಿ ಹೇಳಿದ್ದಾರೆ.

