ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ತೈಲ ಮಾರುಕಟ್ಟೆಯ ಮೇಲೆ ಬೀರಿರುವ ಪರಿಣಾಮದಿಂದ ಪಾರಾಗಲು ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯು (ಐಇಎ) ಕೆಲವು ಸಲಹೆಗಳನ್ನು ನೀಡಿದೆ.
ಹೆದ್ದಾರಿಯಲ್ಲಿ ವೇಗದ ಮಿತಿಯನ್ನು ಗಂಟೆಗೆ ಕನಿಷ್ಠ 10 ಕಿ.ಮೀಟರ್‌ನಷ್ಟು ತಗ್ಗಿಸಿ, ಅಡುಗೆ ಮಾಡಲು ವಿದ್ಯುತ್ ಬಳಕೆ ಮಾಡಿ, ವಿಮಾನ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಿ, ಸಮೂಹ ಸಂಚಾರ ಸಾರಿಗೆಯನ್ನು ಬಳಕೆ ಮಾಡಿ, ಸಾಧ್ಯವಿರುವ ಕಡೆಗಳಲ್ಲಿ ವರ್ಕ್ ಫ್ರಂ ಹೋಂಗೆ ಅವಕಾಶ ನೀಡಿ ಎಂದು ಅದು ವರದಿಯಲ್ಲಿ ಹೇಳಿದೆ.
ಸಂಘರ್ಷದಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯ ಇತಿಹಾಸದಲ್ಲಿಯೇ ಕಂಡುಕೇಳರಿಯದಷ್ಟು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ತುರ್ತು ಸಂದರ್ಭಕ್ಕಾಗಿ ಮೀಸಲಿಡಲಾಗಿದ್ದ 400 ಮಿಲಿಯನ್ ಬ್ಯಾರೆಲ್ ತೈಲವನ್ನು ಬಿಡುಗಡೆ ಮಾಡಲು ಐಇಎ ಸದಸ್ಯ ರಾಷ್ಟ್ರಗಳು ಮಾರ್ಚ್ 11ರಂದು ಒಪ್ಪಿಗೆ ನೀಡಿವೆ.
ಆದರೆ ಇದು ಪೂರ್ಣಪ್ರಮಾಣದ ಅಗತ್ಯವನ್ನು ಪೂರೈಸುವುದಿಲ್ಲ. ಹೀಗಾಗಿ ಪರ್ಯಾಯ ಮಾರ್ಗಗಳ ಮೂಲಕ ಒತ್ತಡವನ್ನು ಕಡಿಮೆ ಮಾಡಲು ಈ ಸಲಹೆಗಳನ್ನು ನೀಡಿದೆ.

