ಕಾಸರಗೋಡು: ನಗರಸಭಾ ವ್ಯಾಪ್ತಿಯ ಬೂತ್ ಸಂಖ್ಯೆ 165 ರಲ್ಲಿ ಎನ್‍ಡಿಎ ಕುಟುಂಬ ಸಂಗಮ ಸಭೆಯನ್ನು ಆಯೋಜಿಸಲಾಯಿತು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಅಶ್ವಿನಿ ಎಂ ಎಲ್ ಸಮಾರಂಭ ಉದ್ಘಾಟಿಸಿದರು.
ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷ ಗುರುಪ್ರಸಾದ್ ಪ್ರಭು, ಕಾಸರಗೋಡು ನಗರಸಭಾ ಸದಸ್ಯ ರವೀಂದ್ರ ಪೂಜಾರಿ, ಬೂತ್ ಅಧ್ಯಕ್ಷ ಸೋಮಶೇಖರ, ಬೂತ್ ಕಾರ್ಯದರ್ಶಿ ಸುಬ್ರಹ್ಮಣ್ಯ, ಹಿರಿಯ ಮುಖಂಡ ಸುರೇಂದ್ರ ಪೂಜಾರಿ, ಮಧೂರು ಪಂಚಾಯತ್ ಪಶ್ಚಿಮ ಕ್ಷೇತ್ರ ಸಮಿತಿ ಅಧ್ಯಕ್ಷ ಮಾಧವ ಮಾಸ್ಟರ್, ಶ್ರುತಿ ಉಪಸ್ಥಿತರಿದ್ದರು.



