ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯವು 39ನೇ ಅಂತರ್ ವಿಶ್ವವಿದ್ಯಾಲಯ ರಾಷ್ಟ್ರೀಯ ಯುವ ಉತ್ಸವದಲ್ಲಿ ಉತ್ತಮ ಫಲಿತಾಂಶ ದಾಖಲಿಸಿಕೊಂಡಿದೆ. ಚೆನ್ನೈನ ಸತ್ಯಭಾಮ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ನಡೆದ ಉತ್ಸವದ ಸ್ಕಿಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ಶಾಸ್ತ್ರೀಯ ನೃತ್ಯ (ದೇವಿಕಾ ಎಸ್ ನಾಯರ್-ಎಂಎ ಅರ್ಥಶಾಸ್ತ್ರ) ಮತ್ತು ಇಂಗ್ಲಿಷ್ ಭಾಷಣ (ಗೌತಮ್ ಶಂಕರ್ - ಎಂಎ ಸಾರ್ವಜನಿಕ ಆಡಳಿತ ಮತ್ತು ನೀತಿ ಅಧ್ಯಯನ)ದಲ್ಲಿ ಮೂರನೇ ಸ್ಥಾನ ಗಳಿಸುವ ಮೂಲಕ ವಿಶ್ವವಿದ್ಯಾನಿಲಯವು ಈ ಸಾಧನೆ ಮಾಡಿದೆ.
ಸಮಗ್ರ ಶಿಕ್ಷಕ ಶಿಕ್ಷಣ ಕಾರ್ಯಕ್ರಮ (ಐಟಿಇಪಿ) ವಿದ್ಯಾರ್ಥಿಗಳಾದ ನಿತಿನಾ ಸುಭಾಷ್, ಆನಂದು ಎಂ.ಕೆ. ಲಿಯಾ ಸಲೀಮ್, ಅನುಸ್ಮಯ ಸುರೇಶ್, ಗಾಯತ್ರಿ ಎಸ್, ಮತ್ತು ಶಿವಾಲಯ ಪಿ.ಎಸ್. ಸ್ಕಿಟ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಯುವ ಉತ್ಸವದಲ್ಲಿ ದೇಶದ 150 ವಿಶ್ವವಿದ್ಯಾಲಯಗಳಿಂದ ಸ್ಪರ್ಧಾಳುಗಳು ಭಾಗವಹಿಸಿದ್ದರು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯ ಕ್ಯಾಂಪಸ್‍ನ 18 ಸದಸ್ಯರ ತಂಡ ಪ್ರತಿನಿಧಿಸಿತ್ತು. ಸಾಂಸ್ಕøತಿಕ ಸಂಯೋಜಕಿ ಡಾ. ಶ್ರವಣ ಕೆ, ಸಹಾಯಕ ಪ್ರಾಧ್ಯಾಪಕ ಡಾ. ಗುಜ್ಜೆಟ್ಟಿ ತಿರುಪತಿ ವಿದ್ಯಾರ್ಥಿಗಳ ಜತೆಗಿದ್ದರು. ವಿಜೇತ ವಿದ್ಯಾರ್ಥಿಗಳನ್ನು ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಸನ್ಮಾನಿಸಿದರು.



