HEALTH TIPS

ಚಿನ್ನದ ಬೆಲೆಯಲ್ಲಿ ಬಾರೀ ಏರಿಕೆ!

ನವದೆಹಲಿ: ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮತ್ತು ಅದರ ನಾಯಕರ ಮೇಲೆ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಅಮೂಲ್ಯ ಲೋಹಗಳ ಮೇಲೆ ಸುರಕ್ಷಿತ ಹೂಡಿಕೆಯನ್ನು ಕಾಣುತ್ತಿದ್ದಾರೆ.

ಜನವರಿಯಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ್ದ ಚಿನ್ನ ಮತ್ತೆ ಏರು ಹಾದಿಯಲ್ಲಿದೆ.

ಫೆಬ್ರವರಿ ತಿಂಗಳ ಆರಂಭದಲ್ಲಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಫೆಬ್ರವರಿ 23 ಸೋಮವಾರದಿಂದ ತುಸು ಏರು ಹಾದಿಯಲ್ಲಿತ್ತು. ಸೋಮವಾರ, ಮಂಗಳವಾರ ಮತ್ತು ಬುಧವಾರ ಚಿನ್ನದಲ್ಲಿ ಅಲ್ಪ ಏರಿಕೆ ಕಂಡುಬಂದು 16 ಸಾವಿರದ ಗಡಿಯನ್ನು ದಾಟಿತ್ತು. ಗುರುವಾರ ಅಲ್ಪ ಕುಸಿತ ಕಂಡ ಬೆಲೆ ಮತ್ತೆ ಶುಕ್ರವಾರ ಅಲ್ಪ ಏರಿಕೆ ಕಂಡಿದ್ದು, ಶನಿವಾರ ದಿಢೀರ್ ಗ್ರಾಂಗೆ 300 ರೂ. ಮೀರಿ ಏರಿಕೆ ಕಂಡಿದೆ. ಇದೀಗ ರವಿವಾರ 17 ಸಾವಿರದ ಗಡಿ ದಾಟಿದೆ.

ಮಧ್ಯಪ್ರಾಚ್ಯದಲ್ಲಿ ಭೌಗೋಳಿಕ ರಾಜಕೀಯದಲ್ಲಿ ಹೊಸ ಉದ್ವಿಗ್ನತೆಯ ನಂತರ ಮಾರ್ಚ್ 1ರಂದು ಭಾರತದಲ್ಲಿ ಚಿನ್ನದ ಬೆಲೆಗಳು ತೀವ್ರವಾಗಿ ಏರಿವೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮತ್ತು ಅದರ ನಾಯಕರ ಮೇಲೆ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಅಮೂಲ್ಯ ಲೋಹಗಳ ಮೇಲೆ ಸುರಕ್ಷಿತ ಹೂಡಿಕೆಯನ್ನು ಕಾಣುತ್ತಿದ್ದಾರೆ.

ಮಾರ್ಚ್ 1ರಂದು ರವಿವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂಗೆ ಬರೋಬ್ಬರಿ 437 ರೂ. ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,73,080 ರೂ.ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 400 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,58,650 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 328 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,29,810 ರೂ. ಗೆ ತಲುಪಿದೆ.

ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?

ಮಾರ್ಚ್ 1ರಂದು ರವಿವಾರ ಮಧ್ಯಾಹ್ನದ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 17,308 (+437) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 15,865 (+400) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,981 (+328) ರೂ. ಬೆಲೆಗೆ ತಲುಪಿದೆ.

ಸ್ಥಿರವಾದ ಬೆಳ್ಳಿದರ

ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಫೆಬ್ರವರಿ 19ರ ಗುರುವಾರದಿಂದ ಏರುಹಾದಿಯಲ್ಲಿತ್ತು. ಗುರುವಾರ ಮತ್ತು ಶುಕ್ರವಾರ ಕೆಜಿಗೆ 2,70,000 ರೂ. ಗೆ ಸ್ಥಿರವಾಗಿ ನಿಂತಿದ್ದ ಬೆಳ್ಳಿ ಬೆಲೆ, ಶನಿವಾರ 5 ರೂ. ಏರಿಕೆಯಾಗಿ 2,75,000ಗೆ ಬಂದು ತಲುಪಿತ್ತು. ನಂತರ ಸೋಮವಾರ ಬರೋಬ್ಬರಿ ಪ್ರತಿ ಗ್ರಾಂಗೆ 25 ರೂ. ಏರಿಕೆ ಕಂಡ ಚಿನ್ನ ಅಂತಿಮವಾಗಿ ಕೆಜಿಗೆ 3,00,000ಕ್ಕೆ ತಲುಪಿತ್ತು. ಆದರೆ ಮಂಗಳವಾರ ಪ್ರತಿ ಗ್ರಾಂಗೆ 15 ರೂ. ಕುಸಿದು ಕೆಜಿಗೆ 2,85,000 ರೂ.ಗೆ ತಲುಪಿದೆ. ಬುಧವಾರ, ಗುರುವಾರ ಮತ್ತು ಶುಕ್ರವಾರ ಸ್ಥಿರವಾಗಿದ್ದ ಬೆಳ್ಳಿಯ ಬೆಲೆ, ಶನಿವಾರ ಗ್ರಾಂಗೆ ರೂ 10 ಏರಿಕೆಯಾಗಿ 2,95,000 ರೂ. ಗೆ ಬಂದು ನಿಂತಿತ್ತು. ರವಿವಾರವೂ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿದೆ.

ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?

ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 17,323 (+437) ರೂ., 22 ಕ್ಯಾರೆಟ್ ಚಿನ್ನದ ದರ 15,880 (+400) ರೂ.

ಮುಂಬೈ: 24 ಕ್ಯಾರೆಟ್ ಚಿನ್ನದ ದರ 17,308 (+437) ರೂ., 22 ಕ್ಯಾರೆಟ್ ಚಿನ್ನದ ದರ 15,865 (+400) ರೂ.

ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 17,313 (+437) ರೂ., 22 ಕ್ಯಾರೆಟ್ ಚಿನ್ನದ ದರ 15,870 (+400) ರೂ.

ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 17,209 (+245) ರೂ., 22 ಕ್ಯಾರೆಟ್ ಚಿನ್ನದ ದರ 15,775 (+225) ರೂ.

ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 17,308 (+437) ರೂ., 22 ಕ್ಯಾರೆಟ್ ಚಿನ್ನದ ದರ 15,865 (+400) ರೂ.

ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 17,308 (+437) ರೂ., 22 ಕ್ಯಾರೆಟ್ ಚಿನ್ನದ ದರ 15,865 (+400) ರೂ.

ಜೈಪುರ: 24 ಕ್ಯಾರೆಟ್ ಚಿನ್ನದ ದರ 17,323 (+437) ರೂ., 22 ಕ್ಯಾರೆಟ್ ಚಿನ್ನದ ದರ 15,880 (+400) ರೂ.

ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 17,323 (+437) ರೂ., 22 ಕ್ಯಾರೆಟ್ ಚಿನ್ನದ ದರ 15,880 (+400) ರೂ.

ಲಕ್ನೋ: 24 ಕ್ಯಾರೆಟ್ ಚಿನ್ನದ ದರ 17,323 (+437) ರೂ., 22 ಕ್ಯಾರೆಟ್ ಚಿನ್ನದ ದರ 15,880 (+400) ರೂ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries