HEALTH TIPS

ಇರಾನ್‍ನ ಮತ್ತೊಂದು ಬ್ಯಾಲಿಸ್ಟಿಕ್ ಕ್ಷಿಪಣಿ ಹೊಡೆದುರುಳಿಸಿದ ನೇಟೊ

ಅಂಕಾರ: ಪೂರ್ವ ಮೆಡಿಟರೇನಿಯನ್‍ನಲ್ಲಿ ನೇಟೋದ ವಾಯು ರಕ್ಷಣಾ ವ್ಯವಸ್ಥೆಯು ಇರಾನ್‍ನಿಂದ ಪ್ರಯೋಗಿಸಲಾದ ಎರಡನೇ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಡೆದುರುಳಿಸಿದೆ. ಕ್ಷಿಪಣಿಯು ಟರ್ಕಿಯ ವಾಯುಪ್ರದೇಶದಲ್ಲಿದ್ದಾಗ ಹೊಡೆದುರುಳಿಸಲಾಗಿದ್ದು ಮುಲಾಜಿಲ್ಲದೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಟರ್ಕಿ ಸೋಮವಾರ ಎಚ್ಚರಿಸಿದೆ.

ಆಗ್ನೇಯ ಗಾಜಿಯಾಂಟೆಪ್ ಪ್ರಾಂತದಲ್ಲಿ ಕ್ಷಿಪಣಿಯ ಅವಶೇಷ ಪತನಗೊಂಡಿದ್ದು ಅದೃಷ್ಟವಶಾತ್ ಯಾವುದೇ ಸಾವು- ನೋವು ವರದಿಯಾಗಿಲ್ಲ. ಇದಕ್ಕೆ ಸೂಕ್ತ ಪ್ರತಿಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಟರ್ಕಿ ಎಚ್ಚರಿಕೆ ನೀಡಿದೆ.

ಇರಾನ್‍ನಲ್ಲಿನ ಯುದ್ದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಬೆಳವಣಿಗೆಗಳು:

ಪ್ರಮುಖ ನೇಟೊ ನೆಲೆಯ ಸಮೀಪದ ಟರ್ಕಿಯ ನಗರ ಅದಾನದಲ್ಲಿರುವ ತನ್ನ ಕಾನ್ಸುಲೇಟ್ ಕಚೇರಿಯ ಎಲ್ಲಾ `ಅನಿವಾರ್ಯವಲ್ಲದ' ಸಿಬ್ಬಂದಿಗಳು ತಕ್ಷಣ ಕಾನ್ಸುಲೇಟ್‍ನಿಂದ ನಿರ್ಗಮಿಸುವಂತೆ ಅಮೆರಿಕ ಸಲಹೆ ನೀಡಿದೆ. ಜೊತೆಗೆ, ದಕ್ಷಿಣ ಟರ್ಕಿಯಲ್ಲಿರುವ ಎಲ್ಲಾ ಅಮೆರಿಕನ್ನರು ಅಲ್ಲಿಂದ ತೆರಳುವಂತೆ ಬಲವಾಗಿ ಸಲಹೆ ನೀಡುವುದಾಗಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.

ಯುಎಇಯ ಸಶಸ್ತ್ರ ಪಡೆಗಳ ಇಬ್ಬರು ಯೋಧರು ಸೋಮವಾರ ಹೆಲಿಕಾಪ್ಟರ್ ದುರಂತದಲ್ಲಿ ಸಾವು. ತಾಂತ್ರಿಕ ವೈಫಲ್ಯದಿಂದ ದುರಂತ ಸಂಭವಿಸಿರುವುದಾಗಿ ಯುಎಇ ಹೇಳಿಕೆ.

ಸೋಮವಾರ ಇರಾನ್ ಪ್ರಯೋಗಿಸಿದ 15 ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ 12 ಅನ್ನು ಹೊಡೆದುರುಳಿಸಿದ್ದು ಮೂರು ಕ್ಷಿಪಣಿಗಳು ಸಮುದ್ರಕ್ಕೆ ಪತನಗೊಂಡಿರುವುದಾಗಿ ಯುಎಇ ವಾಯು ರಕ್ಷಣಾ ವಿಭಾಗ ಹೇಳಿದೆ. ಯುದ್ದ ಪ್ರಾರಂಭಗೊಂಡಂದಿನಿಂದ 253 ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ 233 ಅನ್ನು, 1440 ಡ್ರೋನ್‍ಗಳಲ್ಲಿ 1,359 ಅನ್ನು ಮತ್ತು 8 ಕ್ರೂಸ್ ಕ್ಷಿಪಣಿಗಳನ್ನು ಯುಎಇ ಹೊಡೆದುರುಳಿಸಲಾಗಿದೆ. ಇದರಲ್ಲಿ 4 ಮಂದಿ ಮೃತಪಟ್ಟಿದ್ದು, 117 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಇರಾನ್‍ನ ಯಾವುದೇ ನಾಯಕರನ್ನು ಗುರಿಯಾಗಿಸುವುದನ್ನು ವಿರೋಧಿಸುವುದಾಗಿ ಚೀನಾ ಹೇಳಿದೆ. ಇರಾನ್‍ನ ನೂತನ ಪರಮೋಚ್ಛ ನಾಯಕ ಮೊಜ್ತಾಬ ಖಮೈನಿಯನ್ನು ಗುರಿಯಾಗಿಸಿ ದಾಳಿ ನಡೆಸುವ ಇಸ್ರೇಲ್‍ನ ಬೆದರಿಕೆಗೆ ಪ್ರತಿಕ್ರಿಯಿಸಿದ ಚೀನಾ ` ಮೊಜ್ತಾಬ ಖಾಮಿನೈಯನ್ನು ನೇಮಕಗೊಳಿಸುವುದು ಇರಾನ್‍ನ ಆಂತರಿಕ ವಿಷಯ. ಯಾವುದೇ ನೆಪ ಹೇಳಿ ಇತರ ದೇಶಗಳ ಆಂತರಿಕ ವ್ಯವಹಾರದಲ್ಲಿ ಮಧ್ಯ ಪ್ರವೇಶಿಸುವುದನ್ನು ಚೀನಾ ಬಲವಾಗಿ ವಿರೋಧಿಸುತ್ತದೆ. ಇರಾನ್‍ನ ಸಾರ್ವಭೌಮತೆ, ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಗುವೊ ಜಿಯಾಕುನ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries