ಟೆಲ್ ಅವೀವ್: ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದಲ್ಲಿ ಸೇರುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜಾಗತಿಕ ನಾಯಕರಿಗೆ ಕರೆ ನೀಡಿದ್ದಾರೆ.
ದಕ್ಷಿಣ ಇಸ್ರೇಲ್ ನಗರವಾದ ಅರಾದ್‌ನಲ್ಲಿ ಮಾತನಾಡಿದ ಬೆಂಜಮಿನ್ ನೆತನ್ಯಾಹು, ಕೆಲವು ದೇಶಗಳು ಈಗಾಗಲೇ ಆ ದಿಕ್ಕಿನಲ್ಲಿ ಸಾಗುತ್ತಿವೆ.
ಆದರೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬೆಂಬಲದ ಅಗತ್ಯವಿದೆ ಎಂದು ಹೇಳಿದ್ದಾರೆ.
ಇರಾನ್ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ. ಯುರೋಪ್ ಒಳಗೂ ದೂರದ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಇರಾನ್‌ಗೆ ಇದೆ ಎಂದು ನೆತನ್ಯಾಹು ಹೇಳಿದ್ದಾರೆ.
ಇರಾನ್‌ನ ಕ್ಷಿಪಣಿ ತಯಾರಿಕಾ ಘಟಕವನ್ನು ನಾಶಪಡಿಸಲಾಗಿದೆ ಎಂದು ಅಮೆರಿಕ ಹೇಳಿದೆ. ಸಣ್ಣ ಮತ್ತು ಮಧ್ಯಮ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಿರ್ಮಿಸುತ್ತಿದ್ದ ಇರಾನಿನ ಮಿಲಿಟರಿ ಸೌಲಭ್ಯವನ್ನು ನಾಶಪಡಿಸಿದೆ ಎಂದು ಅಮೆರಿಕ ಹೇಳಿದೆ.

