HEALTH TIPS

ಕ್ಯೂಬಾದ ಮೇಲೆ ಅಮೆರಿಕ ನಿರ್ಬಂಧ: ಇಂಧನ ಕೊರತೆಯಿಂದ ದೇಶದಾದ್ಯಂತ ವಿದ್ಯುತ್‌ ಕಡಿತ

 ಹವಾನಾ: ಕ್ಯೂಬಾದ ಮೇಲೆ ಅಮೆರಿಕವು ಹೇರಿರುವ ನಿರ್ಬಂಧದಿಂದ ಸೃಷ್ಟಿಯಾಗಿರುವ ಇಂಧನ ಕೊರತೆ ಮತ್ತು ಹಾಳಾಗಿರುವ ದೇಶದ ವಿದ್ಯುತ್‌ ಉತ್ಪಾದನಾ ಮೂಲಸೌಕರ್ಯಗಳ ಕಾರಣ ಮತ್ತೊಮ್ಮೆ ದೇಶದಾದ್ಯಂತ ವಿದ್ಯುತ್‌ ಕಡಿತಗೊಂಡಿದೆ. 


ವಿದ್ಯುತ್‌ ಕಡಿತಗೊಂಡಿರುವುದು ಮಾರ್ಚ್‌ ತಿಂಗಳಲ್ಲೇ ಇದು ಮೂರನೇ ಬಾರಿಯಾಗಿದೆ.

ಯಾವ ಕಾರಣಕ್ಕಾಗಿ ವಿದ್ಯುತ್‌ ಕಡಿತ ಮಾಡಲಾಗಿದೆ ಎಂಬ ಬಗ್ಗೆ ಕ್ಯೂಬಾದ ವಿದ್ಯುತ್‌ ಒಕ್ಕೂಟ ಮಾಹಿತಿ ಬಹಿರಂಗ ಮಾಡಿರಲಿಲ್ಲ. ಬಳಿಕ, ಮಾಹಿತಿ ನೀಡಿದ ಒಕ್ಕೂಟವು 'ನ್ಯೂವಿಟಸ್‌ ಉಷ್ಣ ವಿದ್ಯು‌ತ್‌ ಸ್ಥಾವರದಲ್ಲಿ ವಿದ್ಯುತ್‌ ಉತ್ಪಾದನೆ ಸ್ಥಗಿತಗೊಂಡಿದೆ' ಎಂದು ತಿಳಿಸಿದೆ.

'ವಿದ್ಯುತ್ ಪೂರೈಕೆ ಪುನಃ ಆರಂಭಿಸುವ ಬಗ್ಗೆ ನಾವು ಕಾರ್ಯಪ್ರವೃತ್ತರಾಗಿದ್ದೇವೆ' ಎಂದು ಸರ್ಕಾರ ಹೇಳಿದೆ.

ಹಲವು ವರ್ಷಗಳಿಂದ ಹಂತ ಹಂತವಾಗಿ ವಿದ್ಯುತ್‌ ಉತ್ಪಾದನಾ ಮೂಲಸೌಕರ್ಯಗಳು ಹಾಳಾಗುತ್ತಿವೆ. ಈ ಕಾರಣದಿಂದಾಗಿ ಕ್ಯೂಬಾದಲ್ಲಿ ಕಳೆದ ಎರಡು ವರ್ಷದಿಂದ ವಿದ್ಯುತ್‌ ಕಡಿತದ ಸಮಸ್ಯೆ ತೀವ್ರವಾಗಿದೆ. ಒಂದು ದಿನದಲ್ಲಿ ಸುಮಾರು 12 ತಾಸುಗಳವರೆಗೆ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ಸದ್ಯ ಸ್ಥಗಿತಗೊಳಿಸಲಾಗಿದೆ.

ಕಾರಣಗಳೇನು?:

ಕಳೆದ ಮೂರು ತಿಂಗಳಿನಿಂದ ದೇಶದಲ್ಲಿ ತೈಲ ಆಮದು ಆಗುತ್ತಿಲ್ಲ. ದೇಶಕ್ಕೆ ಅಗತ್ಯವಿರುವ ಒಟ್ಟು ವಿದ್ಯುತ್ ಪ್ರಮಾಣದಲ್ಲಿ ಶೇ 40ರಷ್ಟನ್ನು ಮಾತ್ರವೇ ಕ್ಯೂಬಾ ಉತ್ಪಾದಿಸುತ್ತಿದೆ.

'ಕ್ಯೂಬಾಗೆ ಯಾವುದೇ ದೇಶ ತೈಲ ರಫ್ತು ಮಾಡಿದರೆ, ಅಂಥ ದೇಶಗಳ ಮೇಲೆ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಜನವರಿಯಲ್ಲಿ ಬೆದರಿಕೆ ಹಾಕಿದ್ದರು. ಈ ಕಾರಣದಿಂದ ನಮಗೆ ಯಾರೂ ತೈಲ ರಫ್ತು ಮಾಡುತ್ತಿಲ್ಲ. ವಿದ್ಯುತ್ ಕೊರತೆಗೆ ಇದೂ ಕಾರಣ' ಎನ್ನುವುದು ಕ್ಯೂಬಾ ಸರ್ಕಾರದ ವಾದ.

ಕ್ಯೂಬಾವನ್ನು ವಶಕ್ಕೆ ಪಡೆದುಕೊಳ್ಳುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಪದೇ ಪದೇ ಹೇಳುತ್ತಲೇ ಇದ್ದಾರೆ. 'ಸ್ನೇಹಪೂರ್ವಕವಾಗಿ ಕ್ಯೂಬಾವನ್ನು ವಶಕ್ಕೆ ಪಡೆದುಕೊಳ್ಳುತ್ತೇವೆ' ಎಂದು ಇತ್ತೀಚೆಗೆ ಟ್ರಂಪ್‌ ಹೇಳಿದ್ದರು. ಮತ್ತೊಮ್ಮೆ 'ಕ್ಯೂಬಾ ಸರ್ಕಾರವು ಕುಸಿಯುವ ಅಂಚಿಗೆ ಬಂದು ನಿಂತಿದೆ' ಎಂದಿದ್ದರು. ಕಳೆದ ಬಾರಿ ಇದೇ ರೀತಿ ವಿದ್ಯುತ್‌ ಕಡಿತವಾದಾಗ 'ಕ್ಯೂಬಾವನ್ನು ವಶಕ್ಕೆ ಪಡೆದುಕೊಳ್ಳುವ ಗೌರವ ನನಗೆ ಒಲಿಯದೆ' ಎಂದಿದ್ದರು.  







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries