ಉಪ್ಪಳ: ಕೇಂದ್ರ ಸರ್ಕಾರದ ಮೊತ್ತ ಬಳಸಿ ನಿರ್ಮಿಸುವ ಯೋಜನೆಗಳನ್ನು ತನ್ನದೆಂದು ಬಿಂಬಿಸಿ ಇದರ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಕೇರಳ ಸರ್ಕಾರ, ರಾಜ್ಯದ ಲೋಕೋಪಯೋಗಿ ಮತ್ತು ಸ್ಥಳೀಯಾಡಳಿತ ಇಲಾಖೆಯ ಯೋಜನೆಗಳನ್ನು ಸಕಾಲದಲ್ಲಿಪೂರ್ತಿಗೊಳಿಸಲು ಗಮನಹರಿಸಲಿ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ತಿಳಿಸಿದ್ದಾರೆ.
ಅವರು, ಡಾಂಬರೀಕರಣ ಪೂರ್ತಿಯಾಗದೇ ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವ ಪೈವಳಿಕೆ ಪಂಚಾಯಿತಿಯ ಲಾಲ್‍ಬಾಗ್-ಚಿಪ್ಪಾರ್-ಕುರುಡಪದವಿನ ಶಿಥಿಲರಸ್ತೆ ರಸ್ತೆಯ ಶಿಥಿಲಾವಸ್ಥೆ ಕಾಮಗಾರಿ ವೀಕ್ಷಿಸಿದ ನಂತರಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿ ಯೋಜನೆಯನ್ನು ಪಿಣರಾಯಿ ವಿಜಯನ್ ಸರ್ಕಾರದ ಸಾಧನೆ ಎಂದು ಬಿಂಬಿಸುತ್ತಿರುವ ಎಡರಂಗ ಸರ್ಕಾರ, ತನ್ನದೇ ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳನ್ನು ಪೂರ್ತಿಗೊಳಿಸಲಾಗದೆ ನೆನೆಗುದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಒಂದೂವರೆ ವರ್ಷದ ಹಿಂದೆ ಟೆಂಡರ್ ಮಾಡಲಾದ ಲಾಲ್‍ಭಾಗ್-ಚಿಪ್ಪಾರ್-ಕುರುಡಪದವು ರಸ್ತೆ ಕಳೆದ ಮೂರು ತಿಂಗಳಿಂದ ಕೆಲಸ ಸ್ಥಗಿತಗೊಂಡಿದೆ. ಇದರಿಂದಾಗಿ ಈ ಹಾದಿಯಾಗಿ ಸಂಚರಿಸುವ ಬಸ್‍ಗಳು ಇತರ ವಾಹನಗಳು ಬದಲಿ ಹಾದಿಯ ಮೂಲಕ ಸಂಚಾರ ನಡೆಸಬೇಕಾಗುತ್ತಿದೆ. ರಸ್ತೆ ಅಭಿವೃದ್ಧಿ ಸಂದರ್ಭ ರಸ್ತೆಅಂಚಿಗಿರುವ ವಿದ್ಯುತ್ ಕಂಬಗಳ ಸ್ಥಳಾಂತರ ಪ್ರಕ್ರಿಯೆಯೂ ನಿಧಾನಗತಿಯಲ್ಲಿ ಸಾಗುತ್ತಿದೆ.
ಪ್ರಸಕ್ತ ರಸ್ತೆ ಕಾಮಗಾರಿ ಶೀಘ್ರ ಪೂರ್ತಿಗೊಳಿಸಿ ನಾಡಿಗೆ ಸಮರ್ಪಿಸದಿದ್ದರೆ ಜನಾಂದೋಲನಕ್ಕೆ ಬಿಜೆಪಿ ನೇತೃತ್ವ ನೀಡಲಿರುವುದೆಂದು ಎಂ. ಎಲ್. ಅಶ್ವಿನಿ ತಿಳಿಸಿದ್ದಾರೆ.
ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ, ಪೈವಳಿಕೆ ನಾರ್ತ್ ಏರಿಯಾ ಅಧ್ಯಕ್ಷ ಸತ್ಯಶಂಕರ ಭಟ್, ಕಾರ್ಯದರ್ಶಿ ಪ್ರವೀಣ ಪಟ್ಲ, ಸೌತ್ ಏರಿಯಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕೀರ್ತಿ ಭಟ್, ಗ್ರಾ. ಪಂ. ಸದಸ್ಯರಾದ ಸುಮನ ಜಿ. ಭಟ್, ರಾಮ ಏದಾರ್, ರಾಮಕೃಷ್ಣ ಬಿ. ಕೆ, ಗಣೇಶ್ ಪ್ರಸಾದ್, ಸುಜಾತ, ಗೋಪಾಲ ಸಫಲ್ಯ, ಸಲೀಲ್ ಮಾಸ್ಟರ್, ಬಾಲಕೃಷ್ಣ, ವಿಶ್ವನಾಥ ಮಾಣಿಪ್ಪಾಡಿ ಮೊದಲಾದವರು ಜಿಲ್ಲಾಧ್ಯಕ್ಷೆಯ ಜತೆಗಿದ್ದರು.



