ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಕರಿಕ್ಕಡವು ಉಡುಮಂಡಲ ನಿವಾಸಿ ಎಂ. ಸಮೀರಾ ಅವರ ಪುತ್ರಿ ಜಾಸ್ಮೀನಾ(19)ನಾಪತ್ತೆಯಾಗಿರುವಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಮನೆಯಿಂದ ಹೊರಟಿದ್ದ ಈಕೆ ವಾಪಸಾಗಿಲ್ಲ. ಈಕೆ ಸಜೀರ್ ಎಂಬಾತನ ಜತೆ ತೆರಳಿರಿರುವ ಸಾಧ್ಯತೆಯಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಯುವತಿ ಪತ್ತೆಗಾಗಿ ಪೊಲೀಸರು ಸೈಬರ್ ಸೆಲ್ ಸಹಾಯದೊಂದಿಗೆ ತನಿಖೆ ಆರಂಭಿಸಿದ್ದಾರೆ.

