ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀದೇವರ ಬಲಿ ಉತ್ಸವ ನಡೆಯಿತು. ಬೇಡಿಕಟ್ಟೆ ಸೇವಾ ಸಮಿತಿ ವತಿಯಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷರಾದ ರವೀಂದ್ರ ಪೂಜಾರಿ ಕರಂದಕ್ಕಾಡ್ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭ ಹಿರಿಯರಾದ ಜಗಜೀವನ್ ರಾವ್, ರಾಜಶೇಖರ್, ಅಭಿಜ್ಞ ಹರೀಶ್, ಗಿರಿಧರ್ ಸಾಲಿಯಾನ್, ರಾಮನ್, ಹರೀಶ್ ಕೆಆರ್, ಇವರನ್ನು ಗೌರವಿಸಲಾಯಿತು ಕೋಶಾಧಿಕಾರಿ ಗಲೇಶ್ ಎ ಕೇಶವ ಹಾಗೂ ವೀರ ಹನುಮಾನ್ ಮಂದಿರದ ಅಧ್ಯಕ್ಷರಾದ ಗಣೇಶ್ ಉಪಸ್ಥಿತರಿದ್ದರು. ರಾಧಾಕೃಷ್ಣ ಸುರ್ಲುಸ್ವಾಗತಿಸಿದರು. ಹರೀಶ್ ಕೆ ಆರ್ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಕರಂಡಕಾಡ್ ವಂದಿಸಿದರು.
(ಕಾಸರಗೊಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀದೇವರ ಬಲಿ ಉತ್ಸವ ನಡೆಯಿತು.)


