HEALTH TIPS

ಯುಎಇಯಲ್ಲಿ ಮುಂದುವರಿದ ಭಾರೀ ಮಳೆಗೆ ರಸ್ತೆಗಳು ಜಲಾವೃತ; ಹಲವೆಡೆ ಕೃತಕ ನೆರೆ

ದುಬೈ: ಯುಎಇಯಾದ್ಯಂತ ಗುರುವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಇದರಿಂದ ಹಲವು ಕಡೆ ಕೃತಕ ನೆರೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು.

ಗುರುವಾರ ತಡ ರಾತ್ರಿ ಯುಎಇಯ ಅಬುಧಾಬಿ, ದುಬೈ, ಶಾರ್ಜಾ, ಅಜ್ಮಾನ್, ರಾಸ್ ಅಲ್ ಖೈಮಃ ಸೇರಿದಂತೆ ಹಲವಡೆ ಭಾರಿ ಗುಡುಗು, ಮಿಂಚು ಸಹಿತ ಮಳೆ ಆಗಿದೆ.

ಇದರಿಂದ ರಾತ್ರಿಯಿಂದಲೇ ಹಲವು ಕಡೆಗಳ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಶುಕ್ರವಾರ ರಸ್ತೆಗಳು ಸಂಪೂರ್ಣ ಬಂದಾಗಿತ್ತು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜನ ಮನೆಯಿಂದ ಹೊರಬರಲು ಪರದಾಟ ನಡೆಸುವಂತಾಯಿತು.

ಗುರುವಾರ ರಾತ್ರಿ ಸುರಿದ ಮಳೆಯಿಂದ ಶುಕ್ರವಾರವೂ ರಸ್ತೆಗಳು ಜಲಾವೃತಗೊಂಡಿದ್ದು, ನೀರು ಹೆಚ್ಚಿನ ಪ್ರಮಾಣ ದಲ್ಲಿ ತುಂಬಿದ್ದ ಕಾರಣ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಭಾರಿ ಮಳೆ ಸುರಿದ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ವಾಹನಗಳನ್ನು ಹೊರತೆಗೆಯದೇ ತಮ್ಮ ಕಚೇರಿಯ ಕೆಲಸ, ಕಾರ್ಯಗಳನ್ನು ಮನೆಯಲ್ಲಿಯೇ ಮಾಡುವ ಪರಿಸ್ಥಿತಿ ಉಂಟಾಗಿತ್ತು.

ಶಾರ್ಜಾದ ನಾನಾ ಭಾಗಗಳು ಮಳೆಯಿಂದಾಗಿ ಜಲಾವೃತಗೊಂಡಿದ್ದು, ಪ್ರಮುಖ ರಸ್ತೆಗಳು ಕೂಡ ನೀರಿನಿಂದ ಸಂಪೂರ್ಣ ಜಲಾವೃತವಾಗಿವೆ. ನ್ಯಾಷನಲ್ ಸೆಂಟರ್ ಆಫ್ ಮೆಟರೋಲಾಜಿ(NCM) ವರದಿ ಪ್ರಕಾರ ರಾಸ್ ಅಲ್ ಖೈಮಃದ ಶೌಕದಲ್ಲಿ ಅತೀ ಹೆಚ್ಚು 77.5 ಮಿಮೀ ಮಳೆಯಾಗಿದೆ. ಮಳೆ ಶನಿವಾರದಿಂದ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹವಾಮಾನ ಇಲಾಖೆ ಶುಕ್ರವಾರ ಭಾರಿ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಿದ್ದರಿಂದ ಇಂದು ಹಲವು ಕಡೆಗಳಲ್ಲಿ ಹೋಟೆಲ್, ಅಂಗಡಿ, ಬಾರ್ಬರ್ ಶಾಪ್‌ಗಳು, ಲಾಂಡ್ರಿಗಳು ಸೇರಿದಂತೆ ಹಲವಾರು ಸಣ್ಣಪುಟ್ಟ ಅಂಗಡಿಗಳು ಮುಚ್ಚಿದ್ದವು. ಹೆಚ್ಚಿನ ಜನರು ಮನೆಯಿಂದ ಹೊರಬಾರದೇ ಮನೆಯಲ್ಲಿಯೇ ಉಳಿಯುವಂತಾಯಿತು. ಹಲವು ಕಡೆಗಳಲ್ಲಿ ರಸ್ತೆಗಳಲ್ಲಿ ತುಂಬಿರುವ ನೀರನ್ನು ಟ್ಯಾಂಕರ್ ಗಳ ಮೂಲಕ ನಗರಪಾಲಿಕೆ ಖಾಲಿ ಮಾಡುತ್ತಿರುವ ದೃಶ್ಯಗಳು ಕಂಡುಬಂದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries