HEALTH TIPS

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣಕ್ಕೆ ವಿ.ವಿ.ಗಳು ಶಾಂತಿಯುತ ಪ್ರತಿಭಟನೆ ನಿರ್ಬಂಧಿಸಲು ಸಾಧ್ಯವಿಲ್ಲ: ದಿಲ್ಲಿ ಹೈಕೋರ್ಟ್‌

ನವದೆಹಲಿ: ವಿದ್ಯಾರ್ಥಿಗಳ ಅಭಿಪ್ರಾಯಗಳು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ ಸಿದ್ಧಾಂತದೊಂದಿಗೆ ಹೊಂದಿಕೆಯಾಗುವುದಿಲ್ಲ ಎಂಬ ಕಾರಣಕ್ಕೆ ವಿಶ್ವವಿದ್ಯಾನಿಲಯಗಳು ಶಾಂತಿಯುತ ಪ್ರತಿಭಟನೆಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಅಭಿಪ್ರಾಯಿಸಿದೆ.

ಡಾ. ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯ ಉಚ್ಛಾಟನೆಯನ್ನು ರದ್ದುಗೊಳಿಸುವ ಸಂದರ್ಭ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಶಿಕ್ಷೆ ಅತ್ಯಧಿಕ ಅಸಮಾನ ಹಾಗೂ ಕಾನೂನಿನಲ್ಲಿ ಅಸಮರ್ಥನೀಯ ಎಂದು ಅದು ಹೇಳಿದೆ.

ಜೂನ್ ಹಾಗೂ ಆಗಸ್ಟ್‌ನಲ್ಲಿ ತನ್ನ ವಿರುದ್ಧ ಜಾರಿಗೊಳಿಸಲಾಗಿದೆ ಎನ್ನಲಾದ ಶಿಸ್ತು ಕ್ರಮ ಆದೇಶಗಳನ್ನು ಪ್ರಶ್ನಿಸಿದ ವಿದ್ಯಾರ್ಥಿನಿಯೊಬ್ಬರ ಅರ್ಜಿಯನ್ನು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರು ಮಾರ್ಚ್ 13ರ ತನ್ನ ಆದೇಶದಲ್ಲಿ ಪುರಸ್ಕರಿಸಿದರು.

ಕೇವಲ ವಿಧೇಯತೆಯನ್ನು ಒಪ್ಪಿಕೊಳ್ಳುವ ಹಾಗೂ ಪ್ರತಿಭಟನೆ, ಟೀಕೆಗಳನ್ನು ನಿರುತ್ಸಾಹಗೊಳಿಸುವ ವಿಶ್ವವಿದ್ಯಾನಿಲಯ ತನ್ನ ವಿಶಾಲ ಶೈಕ್ಷಣಿಕ ಪಾತ್ರವನ್ನು ನಿರ್ವಹಿಸುವವಲ್ಲಿ ವಿಫಲವಾಗುತ್ತದೆ ಎಂದು ನ್ಯಾಯಮೂರ್ತಿ ಹೇಳಿದರು.

ವಿಶ್ವವಿದ್ಯಾನಿಲಯದ ಪಾತ್ರ ಪ್ರತಿಯೊಂದು ಭಿನ್ನಾಭಿಪ್ರಾಯವನ್ನು ದಮನಿಸುವುದಲ್ಲ. ಬದಲಾಗಿ, ಅಂತಹ ಅಭಿವ್ಯಕ್ತಿಗೆ ಪ್ರತಿಕ್ರಿಯಿಸಲಾಗಿದೆಯೇ ಹಾಗೂ ಗಮನಹರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಎಂದು ಅವರು ಹೇಳಿದರು.

ವಿಶ್ವವಿದ್ಯಾನಿಲಯ ತರಗತಿಗೆ ಹಾಜರಾಗುವ ಒಂದು ಸ್ಥಳ ಮಾತ್ರವಲ್ಲ. ಬದಲಾಗಿ ವಿದ್ಯಾರ್ಥಿಗಳು ಕಲಿಯುವ, ಸ್ವತಂತ್ರ್ಯ ಚಿಂತನೆಯನ್ನು ಬೆಳಸಿಕೊಳ್ಳುವ, ಪ್ರಶ್ನೆಗಳನ್ನು ಕೇಳುವ ಹಾಗೂ ವಿಮರ್ಶಾತ್ಮಕ ಚಿಂತನೆಯಲ್ಲಿ ತೊಡಗಿಸಿಕೊಳ್ಳುವ ಸ್ಥಳವೆಂದು ನಿರೀಕ್ಷಿಸಲಾಗಿದೆ ಎಂದು ನ್ಯಾಯಮೂರ್ತಿ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries