ಬದಿಯಡ್ಕ: ಹೆಚ್ಚುತ್ತಿರುವ ಆಧುನೀಕರಣದ ಮಧ್ಯೆ ನಮ್ಮ ಪಾರಂಪರಿಕ ಜೀವನ ಶೈಲಿಗಳು ಬದಲಾಗದಿರಲಿ. ನವ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬ ಪೋಷಕನೂ ಜವಾಬ್ದಾರಿಯುತರಾಗಿ ಪ್ರವರ್ತಿಸಿದಾಗ ಸುಂದರ ವ್ಯವಸ್ಥೆ ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಬದುಕು, ಜೀವನ ಕೌಶಲ್ಯ, ಧಾರ್ಮಿಕ-ಆಧ್ಯಾತ್ಮಿಕ ಮೌಲ್ಯಗಳನ್ನು ಮಕ್ಕಳಿಗೆ ಕೈದಾಟಿಸಿದಾಗ ಪ್ರಬಲ ಅಂತಃಶಕ್ತಿಯ ಪೀಳಿಗೆ ಸೃಷ್ಟಿಗೊಳ್ಳುವುದು ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಅನುಗ್ರಹ ಸಂದೇಶ ನೀಡಿದರು.
ಹಿರಿಯ ಸಹಕಾರಿ ಸುಬ್ರಹ್ಮಣ್ಯ ಭಟ್ ಅವರ ಸಹಸ್ರ ಚಂದ್ರದರ್ಶನ ಶಾಂತಿ ಸಹಿತ ವಿವಿಧ ಕಾರ್ಯಕ್ರಮಗಳ ಅಂಗವಾಗಿ ಬುಧವಾರ ಸಂಜೆ ಪುದುಕೋಳಿಯಲ್ಲಿ ನಡೆದ ಅಭಿನಂದನೆ-ಗುರುವಂದನೆ ಸಮಾರಂಭದಲ್ಲಿ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ಜನ್ಮನೀಡಿ ಕರ್ಮಭೂಮಿಯಾದ ಭೂಮಿಯಲ್ಲಿ ಏನನ್ನಾದರೂ ಸಾಧಿಸಲು ಅವಕಾಶ ನೀಡಿದ ತಂದೆ-ತಾಯಿಯರನ್ನು ಬದುಕಿನ ಮುಸ್ಸಂಜೆಯಲ್ಲಿ ಅನಾಥಾಶ್ರಮಗಳಲ್ಲಿ ಬಂದಿಯಾಗಿಸುವ ಕೀಳು ಮಟ್ಟಕ್ಕಿಳಿಯದೆ ಅವರೊಮದಿಗೆ ಒಂದಾಗಿ ಮುನ್ನಡೆಯುವ ಕುಟುಂಬ ವ್ಯವಸ್ಥೆ ಬಲಗೊಳ್ಳಬೇಕೆಂದು ಅವರು ಈ ಸಂದರ್ಭ ನೆನಪಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನಗೈದು, ಬದುಕಲ್ಲಿ ನಾವು ಯಾವ ಧರ್ಮವನ್ನು ಅನುಸರಿಸುತ್ತೇವೆಯೋ ಅದುವೇ ನಮ್ಮನ್ನು ಪೋಷಿಸಿ ಕಾಪಾಡುತ್ತದೆ. ಭಾರತೀಯ ಸಂಸ್ಕøತಿಯ ಜೀವನಾಡಿ ಕುಟುಂಬ ವ್ಯವಸ್ಥೆಯಾಗಿದ್ದು, ಆ ವ್ಯವಸ್ಥೆಗೆ ಚ್ಯುತಿ ಬಂದಾಗ ಸಂಸ್ಕøತಿ ನಾಶವಾಗುತ್ತದೆ ಎಂಬ ಅರಿವು ನಮ್ಮಲ್ಲಿರಲಿ ಎಂದವರು ತಿಳಿಸಿದರು.
ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಶಂಕರ ಡಿ. ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಖ್ಯಾತ ಜ್ಯೋತಿಷ್ಯ ವಿದ್ವಾನ್ ವೆಂಕಟೇಶ್ವರ ಭಟ್ ಕುಂಜಾರು ಅಭಿನಂದಿಸಿ ಮಾತನಾಡಿದರು. ಮೈಸೂರು ವಿ.ವಿ.ಯ.ದೂರ ಶಿಕ್ಷಣ ನಿರ್ದೇಶನಾಲಯದ ರಿಜಿಸ್ಟಾರ್ ನವೀನ್ ಕುಮಾರ್, ನಂಜುಂಡಸ್ವಾಮಿ ಚೆನ್ನರಾಯಪಟ್ಟಣ, ರಾಜಗೋಪಾಲ ಭಟ್ ಬೇಲಕೇರಿ, ಸಿದ್ದರಾಜು ಮೈಸೂರು, ಬ್ಲಾ.ಪಂ.ಸದಸ್ಯ ಮಹೇಶ್ ವಳಕ್ಕುಂಜ, ಬದಿಯಡ್ಕ ಗ್ರಾ.ಪಂ.ಉಪಾಧ್ಯಕ್ಷೆ ವಿದುಷಿಃ ಅಶ್ವಿನಿ ಮೊಳೆಯಾರ, ಸದಸ್ಯೆ ರಜನಿ ಸಂದೀಪ್ ಪುದುಕೋಳಿ ಉಪಸ್ಥಿತರಿದ್ದು ಶುಭಹಾರೈಸಿದರು. ಬ್ಲಾ.ಪಂ.ಸದಸ್ಯ ಖಾದರ್ ಮಾನ್ಯ, ಗ್ರಾ.ಪಂ.ಸದಸ್ಯ ಶ್ಯಾಮ ಪ್ರಸಾದ್ ಮಾನ್ಯ ಮೊದಲಾದವರು ಮಾತನಾಡಿದರು. ವಿವಿಧ ವಲಯದ ಸಾಧಕರನ್ನು ಈ ಸಂದರ್ಭ ಗೌರವಿಸಿ ಅಭಿನಂದಿಸಲಾಯಿತು. ಸುಬ್ರಹ್ಮಣ್ಯ ಭಟ್-ರುಕ್ಮಿಣಿ ಅಮ್ಮ ದಂಪತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಕ್ಷಮಿತ್ರರು ಮಾನ್ಯ ವತಿಯಿಂದ ಸಹಸ್ರಚಂದ್ರ ದರ್ಶನ ಆಚರಿಸಿದ ಸುಬ್ರಹ್ಮಣ್ಯ ಭಟ್ ದಂಪತಿಗಳನ್ನು ಸನ್ಮಾನಿಸಲಾಯಿತು. ಸಂತೋಷ್ ಕುಮಾರ್ ಮಾನ್ಯ ಸ್ವಾಗತಿಸಿ, ಸುಂದರ ಶೆಟ್ಟಿ ಕೊಲ್ಲಂಗಾನ ವಂದಿಸಿದರು. ಕೃಷ್ಣಮೂರ್ತಿ ಪುದುಕೋಳಿ ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
.jpg)
