ಟೆಹರಾನ್: ಇರಾನ್‌ನ ಅತ್ಯುನ್ನತ ರಾಷ್ಟ್ರೀಯ ಭದ್ರತಾ ಮಂಡಳಿಯ ನೂತನ ಕಾರ್ಯದರ್ಶಿಯಾಗಿ ಮೊಹಮ್ಮದ್ ಬಘೇರ್ ಝೋಲ್ಗಾದ್ರ್ ಅವರನ್ನು ನೇಮಕ ಮಾಡಲಾಗಿದೆ ಎಂದು ವರದಿಯಾಗಿದೆ.
ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರೀಜಾನಿ ಅವರ ಹತ್ಯೆಯಿಂದ ಈ ಸ್ಥಾನ ತೆರವಾಗಿತ್ತು.
ಮೊಹಮ್ಮದ್ ಬಘೇರ್ ಝೋಲ್ಗಾದ್ರ್ ರೆವಲ್ಯೂಷನರಿ ಗಾರ್ಡ್‌ನ ಮಾಜಿ ಕಮಾಂಡರ್ ಆಗಿದ್ದು, ಹಲವು ಭದ್ರತಾ ಹುದ್ದೆಗಳನ್ನು ಅಲಂಕರಿಸಿದ್ದಾರೆ. ರಾಜಕೀಯ ಬಣವಾದ ಪಾಪ್ಯುಲರ್ ಫ್ರಂಟ್ ಆಫ್ ಇಸ್ಲಾಮಿಕ್ ರೆವಲ್ಯೂಷನರಿ ಫೋರ್ಸಸ್‌ನ ಮುಖ್ಯಸ್ಥ ಸ್ಥಾನವನ್ನು ವಹಿಸಿದ್ದರು.
ಲಾರೀಜಾನಿ, ಅಮೆರಿಕ ನಡೆಸಿದ್ದ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಮೃತಪಟ್ಟ ನಂತರ ಹತ್ಯೆಯಾದ ಅತ್ಯಂತ ಹಿರಿಯ ಅಧಿಕಾರಿ ಎಂದು ವರದಿಯಾಗಿದೆ.

