ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವಕ್ಕೆ ಧ್ವಜಾರೋಹಣ ನಡೆಯಿತು. . ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಖ್ರಮದ ಅಂಗವಾಗಿ ಗಣಪತಿ ಹವನ, ಬಳ್ಳಪದವು ವೀಣಾವಾದಿನಿ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ, ಸಾಮೂಹಿಕ ಪ್ರಾರ್ಥನೆ ನಡೆಯಿತು.
21ರಂದು ಉತ್ಸವಬಲಿ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು. 22ರಂದು ಬೆಳಗ್ಗೆ 7ಕ್ಕೆ ಉಷ:ಪೂಜೆ, ಉತ್ಸವಬಲಿ, ರಾತ್ರಿ 8.30ಕ್ಕೆ ಪೂಜೆ, ಉತ್ಸವಬಲಿ, ಕಟ್ಟೆಪೂಜೆ, ಕರಂದಕ್ಕಾಡು ಬೆಡಿಕಟ್ಟೆಯಲ್ಲಿ ವಿಶೇಷ ಪೂಜೆ, ಉತ್ಸವ, ಶ್ರೀದೇವರ ಶಯನ ನಡೆಯುವುದು. 23ರಂದು ಬೆಳಗ್ಗೆ ಶಯನೋದ್ಘಾಟನೆ, ಸಂಜೆ 6ಕ್ಕೆ ತಾಯಂಬಕ, ರಾತ್ರಿ 8.30ಕ್ಕೆ ಪೂಜೆ, ಉತ್ಸವಬಲಿ, ಕಟ್ಟೆಪೂಜೆ, ಅವಭೃತ ಸ್ನಾನ, ದರ್ಶನಬಲಿ, ರಾಜಾಂಗಣ ಪ್ರಸಾದ, ಧ್ವಜಾವರೋಹಣ, ರಾತ್ರಿ 9.30ಕ್ಕೆ ಸಾಂಸ್ಕøತಿಕ ಕಲಾವೈಭವ ನಡೆಯುವುದು.



