ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್‍ನ ಉದ್ಘಾಟನೆ ನೆರವೇರಿತು. ಪಯಸ್ವಿನಿ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ನಿರ್ದೇಶಕ ಜಿಯೋ ಬೇಬಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ರಾಜಕೀಯ ಅಥವಾ ಧರ್ಮವನ್ನು ಲೆಕ್ಕಿಸದೆ ಮಾನವೀಯತೆ ಎತ್ತಿಹಿಡಿಯುವ ಕೆಲಸ ನಡೆಸಬೇಕು ಎಂದು ಅವರು ಹೇಳಿದರು.
ವಿಶ್ವ ವಿದ್ಯಾಲಯ ಉಪಕುಲಪತಿ ಪೆÇ್ರ.ಸಿದ್ದು ಪಿ. ಅಲಗೂರ್ ಸಮರಂಭದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳ ಕಲ್ಯಾಣ ದೃಷ್ಟಿಯಿಂದ ಮಂಡಳಿಯ ಚಟುವಟಿಕೆಗಳಿಗೆ ಎಲ್ಲಾ ಬೆಂಬಲ, ಸಹಕಾರ ನೀಡುವ ಬಗ್ಗೆ ಭರವಸೆ ನೀಡಿದರು. ಪ್ರಭಾರ ಕುಲಪತಿ ಪೆÇ್ರ. ವಿ.ಬಿ. ಸಮೀರ್ ಕುಮಾರ್, ವಿದ್ಯಾರ್ಥಿ ಕಲ್ಯಾಣ ಡೀನ್ ಪೆÇ್ರ. ರಾಜೇಂದ್ರ ಪಿಲಾಂಕಟ್ಟೆ, ಪರೀಕ್ಷಾ ನಿಯಂತ್ರಕ ಡಾ. ಆರ್. ಜಯಪ್ರಕಾಶ್, ಶೈಕ್ಷಣಿಕ ವಿಭಾಗ ಡೀನ್ ಪೆÇ್ರ. ಜೋಸೆಫ್ ಕೊಯಿಪಲ್ಲಿ, ಪರಿಷತ್ತಿನ ಅಧ್ಯಕ್ಷ ವಿವೇಕ್ ಎಂ.ಎಸ್. ಮತ್ತು ಕಾರ್ಯದರ್ಶಿ ಸಂಜಯ್ ಎಸ್ ಉಪಸ್ಥಿತರಿದ್ದರು.



