ಬದಿಯಡ್ಕ: ಬದಿಯಡ್ಕ ನಿವಾಸಿಯೊಬ್ಬರು ರೈಲು ಪ್ರಯಾಣ ವೇಳೆ ನದಿಗೆ ಹಾರಿ ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ. ಬದಿಯಡ್ಕ ಪೆಟ್ರೋಲ್ ಬಂಕ್ ಸಮೀಪದ ದಿ. ರವೀಂದ್ರ ಶೆಣೈಯವರ ಪುತ್ರ ಅಚ್ಯುತಾನಂದ ಶೆಣೈ (40) ಎಂಬವರು ತೃಶೂರು ಚಾಲಕ್ಕುಡಿ ಹೊಳೆಗೆ ಹಾರಿ ನಾಪತ್ತೆಯಾಗಿದ್ದಾರೆ. ಇವರನ್ನು ಪತ್ತೆಹಚ್ಚಲು ಪೋಲೀಸರು ಹಾಗೂ ಅಗ್ನಿಶಾಮಕದಳ ಶೋಧ ನಡೆಸಿ ಮೃತದೇಹ ಪತ್ತೆ ಹಚ್ಚಿದರು. ವಿಷಯ ತಿಳಿದು ಸಂಬಂಧಿಕರು ತೃಶೂರಿಗೆ ತೆರಳಿದ್ದಾರೆ.
ನಿನ್ನೆ ಬೆಳಿಗ್ಗೆ 10.45ರ ವೇಳೆ ಘಟನೆ ನಡೆದಿದೆ. ತಿರುವನಂತಪುರದಿಂದ ತೃಶೂರಿಗೆ ತೆರಳುತ್ತಿದ್ದ ವೇನಾಡ್ ಎಕ್ಸ್‍ಪ್ರೆಸ್‍ನಲ್ಲಿ ಅಚ್ಯುತಾನಂದ ಶೆಣೈ ಪ್ರಯಾಣಿಸುತ್ತಿದ್ದರು. ಇವರು ಅಂಗಮಾಲಿ ಕರಯಾಂಪರಂಬ್‍ನ ಇಂಡಿಯನ್ ಮಲ್ಟಿಪಲ್ ಕೋ-ಆಪರೇಟಿವ್ ಸೊಸೈಟಿಯ ಬ್ರಾಂಚ್‍ನಲ್ಲಿ ಸೆಕ್ಷನ್ ಆಫೀಸರ್ ಆಗಿದ್ದಾರೆ.
ನಿನ್ನೆ ಬೆಳಿಗ್ಗೆ ಕಚೇರಿಗೆ ತಲುಪಿದ ಇವರು ಹೊರಗೆ ತೆರಳಿದ್ದರೆಂದು ಹೇಳಲಾಗುತ್ತಿದೆ. ದೀರ್ಘ ಹೊತ್ತು ಕಳೆದರೂ ಮರಳಿ ಬಾರದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಅಚ್ಯುತಾನಂದ ಶೆಣೈಯ ಮೊಬೈಲ್ ಫೆÇೀನ್‍ಗೆ ಕರೆಮಾಡಿದ್ದರು. ಈ ವೇಳೆ ಫೆÇೀನ್ ಕರೆ ಸ್ವೀಕರಿಸಿರುವುದು ವೇನಾಡ್ ಎಕ್ಸ್ ಪ್ರೆಸ್‍ನ ಪ್ರಯಾಣಿಕನಾದ ಓರ್ವ ವ್ಯಕ್ತಿಯಾಗಿದ್ದಾರೆ. ಅಚ್ಯುತಾನಂದ ಶೆಣೈ ಮೊಬೈಲ್ ಫೆÇೀನ್ ಸೀಟಿನಲ್ಲಿರಿಸಿ ರೈಲಿನ ಬಾಗಿಲಿನ ಬಳಿಗೆ ಹೋಗಿರುವುದಾಗಿಯೂ ಬಳಿಕ ಅವರು ನಾಪತ್ತೆಯಾಗಿದ್ದಾರೆಂದು ಪೋನ್ ಕರೆ ಸ್ವೀಕರಿಸಿದ ವ್ಯಕ್ತಿ ತಿಳಿಸಿದ್ದರು.
ಇದೇ ವೇಳೆ ರೈಲ್ವೇ ಹಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರರು ರೈಲಿನಿಂದ ಒಬ್ಬರು ಹೊಳೆಗೆ ಬೀಳುವುದನ್ನು ಕಂಡಿದ್ದು, ಈ ವಿಷಯವನ್ನು ನೌಕರರು ಕೂಡಲೇ ಪೋಲೀಸರಿಗೆ ತಿಳಿಸಿದ್ದಾರೆ. ಬಳಿಕ ಅಗ್ನಿಶಾಮಕದಳ ಹಾಗೂ ಪೋಲೀಸರು ಸ್ಥಳಕ್ಕೆ ತಲುಪಿದ್ದಾರೆ. ಸ್ಕೂಬಾ ಟೀಂ ಡಿಂಗಿ ಬೋಟ್ ಉಪಯೋಗಿಸಿ ರಾತ್ರಿ ಶೋಧ ನಡೆಸಿದರೂ ಪತ್ತೆಹಚ್ಚಲಾಗಲಿಲ್ಲ. ಇಂದು ಬೆಳಿಗ್ಗೆ ಹುಡುಕಾಟ ಪುನರಾರಂಭಿಸಲಾಗಿದೆ. ತಾಯಿ ರಮಾ ಶೆಣೈ, ಪತ್ನಿ ಅನುಷ್ಕ ಎಂಬಿವರು ಅಚ್ಯುತಾನಂದ ಶೆಣೈಯವರ ಜೊತೆ ತೃಶೂರಿನಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಗಾಯತ್ರಿ ಎಂಬ ಸಹೋದರಿಯೂ ಇದ್ದಾರೆ. ನೀರ್ಚಾಲು ವಿಷ್ಣುಮೂರ್ತಿ ನಗರದಲ್ಲಿ ನೂತನವಾಗಿ ನಿರ್ಮಿಸಿದ ಮನೆ ಮುಚ್ಚಿದ ಸ್ಥಿತಿಯಲ್ಲಿದೆ.



