HEALTH TIPS

ವಿಧಾನಸಭಾ ಚುನಾವಣೆಯಲ್ಲಿ ಹಸಿರು ಸಂಹಿತೆ ಜಾರಿ-ಪೂರ್ವ ತರಬೇತಿ

ಕಾಸರಗೋಡು: ಕೇರಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಹಸಿರು ಸಂಹಿತೆ ಅನುಗುಣವಾಗಿ ಕೈಗೊಳ್ಳಬೇಕಾದ ಪೂರ್ವಸಿದ್ಧತಾ ಚಟುವಟಿಕೆಗಳು ಜಿಲ್ಲಾ ಶುಚಿತ್ವ ಮಿಷನ್ ನೇತೃತ್ವದಲ್ಲಿ ನಡೆಯಿತು.  ಚುನಾವಣೆಗಳಿಗೆ ಸಂಬಂಧಿಸಿದಂತೆ, ಗ್ರಾಮ ಪಂಚಾಯಿತಿಗಳ ನೋಡಲ್ ಅಧಿಕಾರಿಗಳು, ಸಹಾಯಕ ಕಾರ್ಯದರ್ಶಿಗಳು, ಆರೋಗ್ಯ ನಿರೀಕ್ಷಕರು, ಶುಚಿತ್ವ ಮಿಷನ್ ಸಂಪನ್ಮೂಲ ವ್ಯಕ್ತಿಗಳು, ವೈ.ಪಿ.ಗಳು, ಹಸಿರು ಸೇನಾ ಮಿಷನ್ ಆರ್.ಪಿ. ಮೊದಲಾದವರಿಗೆ  ಹಸಿರು ಸಂಹಿತೆ ಪಾಲಿಸುವ ನಿಟ್ಟಿನಲ್ಲಿ ತರಬೇತಿ ಆಯೋಜಿಸಲಾಯಿತು.

ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಿಷನ್‍ನ ಜಿಲ್ಲಾ ಸಂಯೋಜಕರು, ಸ್ಥಳೀಯಾಡಳಿತ ಇಲಾಖೆಯ ಸಹಾಯಕ ನಿರ್ದೇಶಕರು, ಜಿಲ್ಲಾ ಎನ್‍ಫೋರ್ಸ್‍ಮೆಂಟ್ ಅಧಿಕಾರಿಗಳು ತರಬೇತಿಯ ನೇತೃತ್ವ ವಹಿಸಿದ್ದರು. ಹಸಿರು ಶಿಷ್ಟಾಚಾರ ಅಭಿಯಾನದ ಚಟುವಟಿಕೆಗಳನ್ವಯ  ಪ್ರಮುಖ ವ್ಯಕ್ತಿಗಳ ಸಂದೇಶ ರೀಲ್‍ಗಳನ್ನು ಸಿದ್ಧಪಡಿಸುವುದರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪೆÇೀಸ್ಟರ್‍ಗಳು ಮತ್ತು ರೀಲ್‍ಗಳನ್ನು ಆಯೋಜಿಸಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಮಾದರಿ ಬೂತ್‍ಗಳನ್ನು ಸ್ಥಾಪಿಸಲಾಗುವುದು. ಹಸಿರು ಶಿಷ್ಟಾಚಾರದ ಭಾಗವಾಗಿ ಬೂತ್‍ಗಳಲ್ಲಿ ಅಳವಡಿಸಬೇಕಾದ ಚಟುವಟಿಕೆಗಳನ್ನು ಶುಚಿತ್ವ ಮಿಷನ್ ನೇತೃತ್ವದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ವಿವರಿಸಲಾಗುವುದು. ಹಸಿರು ಕ್ರಿಯಾ ಸೇನೆ ಕಾರ್ಯಕರ್ತರನ್ನು ಈ ಬೂತ್‍ಗಳಲ್ಲಿ ನಿಯೋಜಿಸಲಾಗುವುದು. ಅಲ್ಲದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾದರಿ ವಾಹನ ಪ್ರಚಾರ  ಬೂತ್ ಸ್ಥಾಪಿಸಲಾಗುವುದು.   ಅಭಿಯಾನದ ಅಂಗವಾಗಿ ಮ್ಯಾಜಿಕ್ ಶೋ, ಅಭ್ಯರ್ಥಿಗಳಿಗೆ ಗ್ರೀನ್ ಪೆÇ್ರೀಟೋಕಾಲ್ ಕಿಟ್, ಸಮುದಾಯ ಚಿತ್ರಕಲೆ, ಸಾಮೂಹಿಕ ಓಟ, ಸೈಕಲ್ ರ್ಯಾಲಿ, ವಾಕಥಾನ್ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.  


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries