ಕಾಸರಗೋಡು: ಚುನಾವಣಾ ಅಧಿಕಾರಿಗಳು ಮತದಾರರ ಮನೆಗಳಿಗೆ ಭೇಟಿ ನೀಡಿ ತಮ್ಮ ಮತಗಳನ್ನು ನೋಂದಾಯಿಸುವ 'ಮನೆ ಮತದಾನ' ಸೇವೆಗಾಗಿ ಜಿಲ್ಲೆಯಲ್ಲಿ 14715 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ದಿವ್ಯಾಂಗ ಮತ್ತು 85 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮನೆಯಿಂದಲೇ ತಮ್ಮ ಮತಗಳನ್ನು ನೋಂದಾಯಿಸಲು ಅವಕಾಶ ನೀಡಲಾಗುವುದು. ಜಿಲ್ಲೆಯಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟವರಿಂದ 4263 ಅರ್ಜಿಗಳು ಮತ್ತು ದಿವ್ಯಾಂಗ ವರ್ಗದಿಂದ 10452 ಅರ್ಜಿಗಳು ಲಭ್ಯವಾಗಿದೆ. ಕಾಸರಗೋಡು ಕ್ಷೇತ್ರದಿಂದ 85 ವರ್ಷಕ್ಕಿಂತ ಮೇಲ್ಪಟ್ಟವರಿಂದ 482 ಅರ್ಜಿಗಳು ಮತ್ತು ದಿವ್ಯಾಂಗ ವರ್ಗದಿಂದ 1790 ಅರ್ಜಿಗಳು ಸೇರಿದಂತೆ ಒಟ್ಟು 2272 ಅರ್ಜಿಗಳು ಬಂದಿವೆ. ಮಂಜೇಶ್ವರ ಕ್ಷೇತ್ರದಿಂದ 85 ವರ್ಷಕ್ಕಿಂತ ಮೇಲ್ಪಟ್ಟವರಿಂದ 477 ಅರ್ಜಿಗಳು ಮತ್ತು ದಿವ್ಯಾಂಗ ವರ್ಗದಿಂದ 2488 ಅರ್ಜಿಗಳು ಸೇರಿದಂತೆ ಒಟ್ಟು 2965 ಅರ್ಜಿಗಳು ಲಭ್ಯವಾಗಿದೆ.
ಉದುಮ ಕ್ಷೇತ್ರದಿಂದ, 85 ವರ್ಷಕ್ಕಿಂತ ಮೇಲ್ಪಟ್ಟ 852 ಅರ್ಜಿಗಳು ಮತ್ತು ದಿವ್ಯಾಂಗ ವರ್ಗದಲ್ಲಿ 2644 ಅರ್ಜಿಗಳು, ಕಾಞಂಗಾಡ್ ಕ್ಷೇತ್ರದಿಂದ, ಒಟ್ಟು 3080 ಅರ್ಜಿಗಳು ಬಂದಿದ್ದು, ಇದರಲ್ಲಿ 1217 ಜನರು 85 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 1863 ಜನರು ದಿವ್ಯಾಂಗ ವರ್ಗಕ್ಕೆ ಸೇರಿದವರಾಗಿದ್ದಾರೆ. ತ್ರಿಕರಿಪುರದಲ್ಲಿ, ಒಟ್ಟು 2902 ಅರ್ಜಿಗಳು ಲಭಿಸಿದ್ದು, ಇದರಲ್ಲಿ 1235 ಅರ್ಜಿಗಳು 85 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 1667 ಅರ್ಜಿಗಳು ದಿವ್ಯಾಂಗ ವರ್ಗಕ್ಕೆ ಸೇರಿದವರಾಗಿದ್ದಾರೆ. ಅವರಿಗೆ ಬೂತ್ ಮಟ್ಟದ ಅಧಿಕಾರಿಗಳ ಮೂಲಕ 1ಡಿ ಫಾರ್ಮ್‍ಗಳನ್ನು ವಿತರಿಸಿರುವುದಾಶಗಿ ಪ್ರಕಟಣೆ ತಿಳಿಸಿದೆ.

