ಕಾಸರಗೋಡು: ಕರಿಚ್ಚೇರಿ ದೀಪಸ್ತಂಭ ಶ್ರೀ ವೆಂಕಟ್ರಮಣ ದೇವಸ್ಥಾನದ ನವೀಕರಣ ಮತ್ತು ಪುನ: ಪ್ರತಿಷ್ಠಾಪನಾ ಬ್ರಹ್ಮಕಲಶ ಮಹೋತ್ಸವ ಅಂಗವಾಗಿ ಕರಿಚ್ಚೇರಿಯ ನಿಟ್ಟಾಂಕೋಟ್ ಭಗವತಿ ದೇವಸ್ಥಾನ ಮತ್ತು ಪೆರ್ಲಡ್ಕಂ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ದೇವಸ್ಥಾನದ ವರೆಗೆ ನಡೆಯಿತು.
ಬ್ರಹ್ಮ ಕಲಶ ಮಹೋತ್ಸವ ಸಮಿತಿ ಅಧ್ಯಕ್ಷ ವಕೀಲ ಎ. ಬಾಲಕೃಷ್ಣನ್ ನಾಯರ್, ನಿರ್ಮಾಣ ಸಮಿತಿ ಅಧ್ಯಕ್ಷ ಕೆ. ಗಂಗಾಧರನ್ ನಾಯರ್ ಮುನಿಕ್ಕಲ್, ಟ್ರಸ್ಟಿಆಡಳಿತ ಮಂಡಳಿ ಅಧ್ಯಕ್ಷ ಕೆ.ಮೋಹನನ್ ನಾಯರ್, ಬ್ರಹ್ಮ ಕಲಶ ಮಹೋತ್ಸವ ಸಮಿತಿ ಸಂಚಾಲಕ ರವೀಂದ್ರನ್ ಕರಿಚ್ಚೇರಿ, ಪ್ರಚಾರ ಸಮಿತಿ ಅಧ್ಯಕ್ಷ ಎ.ದಿವಾಕರನ್ ಕುಂಜಿತೋಡ್, ಕೆ.ಗೋಪಾಲಕೃಷ್ಣನ್ ಕರಿಚ್ಚೇರಿ, ಬೇಬಿ ಬಾಲನ್ ನಿಟ್ಟಂಕೋಟ್ ಮೆರವಣಿಗೆ ನೇತೃತ್ವ ವಹಿಸಿದ್ದರು.
ಮಾರ್ಚ್ 25ರಂದು ನೂರ ಎಂಟು ತೆಂಗಿನಕಾಯಿಗಳಿಂದ ಮಹಾ ಗಣಪತಿ ಹೋಮ, ನಂತರ 9:29 ರಿಂದ 11:32 ರ ಶುಭಮುಹೂರ್ತದಲ್ಲಿ ಶ್ರೀದೇವರ ಪ್ರತಿಷ್ಟೆ, ನಂತರ ಉಪ ದೇವತೆಗಳಾದ ಗಣಪತಿ ಶಾಸ್ತಾರ, ದುರ್ಗಾ ದೇವಿ, ಮತ್ತು ಉಪ ದೇವತೆಗಳಾದ ವಿಷ್ಣು ಮೂರ್ತಿಯ ಪ್ರತಿಷ್ಠೆ, ಹೊರ ಗೋಪುರದಲ್ಲಿ, ಚಾಮುಂಡಿ ನಾಗ ಮತ್ತು ಬ್ರಹ್ಮ ರಾಕ್ಷಸರ ಪ್ರತಿಷ್ಠಾಪನೆ ನಡೆಯುವುದು.



