ಬದಿಯಡ್ಕ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ಹಾಗೂ ಕರ್ನಾಟಕ ಯಕ್ಷಗಾನ ಅಕಾಡಮಿಯ2025ನೇ ಸಾಲಿನ ಪ್ರಶಸ್ತ ವಿಜೇತರಿಗೆ ಅಭಿನಂದನ ಸಮಾರಂಭ ಮಾ. 29ರಂದು ಶ್ರೀಎಡನೀರು ಮಠದಲ್ಲಿ ಜರುಗಲಿದೆ.
ಸಂಜೆ 7ಕ್ಕೆ ರಾತ್ರಿ 8.30ಕ್ಕೆ ನಡೆಯುವ ಅಭಿನಂದನಾ ಸಮಾರಂಭದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದಿವ್ಯ ಉಪಸ್ಥಿತಿಯೊಂದಿಗೆ ಕಲಾವಿದರನ್ನು ಗೌರವಿಸುವರು. ಧಾರ್ಮಿಕ ಸಾಂಸ್ಕøತಿಕ ಮುಖಂಡ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅಧ್ಯಕ್ಷತೆ ವಹಿಸುವರು. ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳೀ ಕಡೆಕಾರ್ ಮುಖ್ಯ ಅತಿಥಿಯಗಿ ಭಾಗವಹಿಸುವರು. ಹಿರಿಯ ಯಕ್ಷಗಾನ ಕಲಾವಿದರಾದ ಡಿ. ಮನೋಹರರ ಕುಮಾರ್, ಬೆಳಾಲು ಲಕ್ಷ್ಮಣ ಗೌಡ ಹಗೂ ವೇಣೂರು ಸದಾಶಿವ ಕುಲಾಲ್ ಅವರನ್ನು ಗೌರವಿಸಲಾಗುವುದು.


