ಕಾಸರಗೋಡು: ಚೆರ್ಕಳ-ಜಾಲ್ಸೂರು ರಸ್ತೆಯ ಡಾಂಬರೀಕರಣ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಮಾರ್ಚ್ 23 ರಿಂದ ಏಪ್ರಿಲ್ 5 ರವರೆಗೆ ಪ್ರಸಕ್ತ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಚೆರ್ಕಳದಿಂದ ಜಾಲ್ಸೂರಿಗೆ ಹೋಗುವ ವಾಹನಗಳು ಪಡಿಯತ್ತಡ್ಕದಿಂದ ಬಲಭಾಗಕ್ಕೆ ತಿರುಗಿ, ಅಡೂರು ಮೂಲಕ ಸಘಿ ಕೊಟ್ಯಡಿಗೆ ತೆರಳಬೇಕು.
ಇನ್ನು ಜಾಲ್ಸೂರಿನಿಂದ ಚೆರ್ಕಳಕ್ಕೆ ಬರುವ ವಾಹನಗಳು ಕೊಟ್ಯಾಡಿಯಿಮದ ಎಡಭಾಗಕ್ಕೆ ಸಾಗಿ, ಅಡೂರು ಮೂಲಕ ತೆರಳಿ ಪಡಿಯತ್ತಡ್ಕ ಸಾಗಿ ಮುಂದೆ ಚೆರ್ಕಳಕ್ಕೆ ಸಾಗಬೇಕು ಎಂದು ಪಿಡಬ್ಲ್ಯೂಡಿ ರಸ್ತೆಗಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆ ತಿಳಿಸಿದೆ.

