ಮುಳ್ಳೇರಿಯ: ಮವ್ವಾರು ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ಮೂಡುಭಾಗ ವಿಸ್ತರಣಾ ಕಾಮಗಾರಿ ಶಿಲಾನ್ಯಾಸ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆಕುಂಜ, ಕ್ಷೇತ್ರದ ತಂತ್ರಿವರಿಯರಾದ ಶಂಕರನಾರಾಯಣ ಗೋಸಾಡ, ಕ್ಷೇತ್ರ ಅರ್ಚಕ ಕೃಷ್ಣ ಭಟ್ ಚೇರ್ಕೂಡ್ಲು ಅವರ ಮಾರ್ಗದರ್ಶನದಲ್ಲಿ ನೆರವೇರಿತು.
ಕ್ಷೇತ್ರದ ಮೊಕ್ತೇಸರ ರಾಮ ಭಟ್ ಮವ್ವಾರು, ಕ್ಷೇತ್ರದ ಅನುವಂಶಿಕ ಮೊಕ್ತೇಸರ ನಾರಾಯಣ ಮಣಿಯಾಣಿ ಬೆಳ್ಳಿಗೆ, ಐತಪ್ಪ ಮವ್ವಾರು, ಪದ್ಮನಾಭ ಭಟ್ ಕೊರೆಕ್ಕಾನ, ಗಂಗಾಧರ ರೈ ಮಠದಮೂಲೆ, ರಾಘವ ಮಣಿಯಾಣಿ ಬೆಳ್ಳಿಗೆ, ವೆಂಕಟೇಶ್ ಭಟ್ ಆಟಿಕುಕ್ಕೆ, ಬಾಲಕೃಷ್ಣ ಭಟ್ ದರ್ಬೆ, ದಾಮೋದರ ಆಳ್ವ ಎಡಂಬಳೆ, ಬ್ಲಾಕ್ ಪಂಚಾಯತಿ ಸದಸ್ಯ ಸುಧಾಮ ಗೋಸಾದ, ಗಣಪತಿ ಭಟ್, ನಾಗರಾಜ ಭಟ್, ನಾಗರಾಜ್ ಎಂ, ರಾಮಕೃಷ್ಣ ಭಟ್, ಚಂದ್ರ ಮಠದಮೂಲೆ, ರಾಮನಾಥ ಭಟ್, ರಾಮ ಮಾಧವ ಭಟ್, ಕೇಶವ ಬೆಳ್ಳಿಗೆ, ದಾಮೋದರ ಮಣಿಯಾಣಿ ಮಲ್ಲಮೂಲೆ, ರಾಮಚಂದ್ರ ಬೆಟ್ಟ, ಚಾಮಗುರಿ ಉದಯಕುಮಾರ್ ಮುಂತಾದರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ಸ್ವಾಗತಿಸಿ, ಕೃಷ್ಣಮೂರ್ತಿ ಎಡಪ್ಪಾಡಿ ವಂದಿಸಿದರು.
ಕ್ಷೇತ್ರದಲ್ಲಿ ಎರಡು ವರ್ಷಗಳ ಹಿಂದೆ ಬ್ರಹ್ಮಕಲಶ ನಡೆದಿದ್ದು, ಕಾರಣಿಕದ ಕ್ಷೇತ್ರವಾಗಿ ಭಕ್ತರ ಇಷ್ಟಾರ್ಥವನ್ನು ಈಡೇರಿಸುತ್ತಿದೆ. ಇದೀಗ ಕ್ಷೇತ್ರದ ಮುಂಭಾಗದಲ್ಲಿ ಎರಡು ಅಂತಸ್ತಿನ ಮೂಡು ಭಾಗ ವಿಸ್ತರಣಾ ಕಾಮಗಾರಿಯನ್ನು ಆರಂಭಿಸಲಾಗಿದೆ. ಭಕ್ತರ ಸಹಕಾರದಿಂದ ಮಾತ್ರ ಇದು ಸಾಧ್ಯ. ಹೆಚ್ಚಿನ ಭಕ್ತರು ಇದರಲ್ಲಿ ಸಹಕರಿಸಬೇಕು ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಂಜೀವ ಶೆಟ್ಟಿ ಕರೆನೀಡಿದರು.

.jpg)
.jpg)
