ಲೋಕಸಭೆಯಲ್ಲಿ ಎರಡನೇ ಪೂರಕ ಅನುದಾನ ಬೇಡಿಕೆಗಳ ಕುರಿತ ಚರ್ಚೆಗೆ ಉತ್ತರಿಸಿದ ಸಚಿವೆ, ಈಗಿನ ಪಶ್ಚಿಮ ಏಶ್ಯ ಬಿಕ್ಕಟ್ಟಿನಂಥ ಅನೂಹ್ಯ ಜಾಗತಿಕ ಸವಾಲುಗಳಿಂದ ಉದ್ಭವಿಸುವ ಆಘಾತವನ್ನು ಹೀರಿಕೊಳ್ಳಲು ಈ ನಿಧಿಯು ಸಹಾಯ ಮಾಡುತ್ತದೆ ಎಂದು ಹೇಳಿದರು.
ಎರಡನೇ ಪೂರಕ ಅನುದಾನ ಬೇಡಿಕೆಗಳ ಮೂಲಕ ಸರ್ಕಾರ ಹಾಲಿ ಹಣಕಾಸು ವರ್ಷದಲ್ಲಿ ಒಟ್ಟು 2.81 ಲಕ್ಷ ಕೋಟಿ ರೂ.ಹೆಚ್ಚುವರಿ ಖರ್ಚಿಗೆ ಲೋಕಸಭೆಯ ಅನುಮೋದನೆ ಕೋರಿದೆ. ಈ ಪೈಕಿ 80,000 ಕೋಟಿ ರೂ. ಮೊತ್ತವನ್ನು ಈಗಾಗಲೇ ಹೆಚ್ಚುವರಿ ಖರ್ಚಿಗಾಗಿ ಸ್ವೀಕರಿಸಲಾಗಿದೆ.
ಹಾಲಿ ಹಣಕಾಸು ವರ್ಷ (2025-26)ದ ವಿತ್ತೀಯ ಕೊರತೆಯು ಪರಿಷ್ಕೃತ ಅಂದಾಜಿನ ವ್ಯಾಪ್ತಿಯಲ್ಲಿಯೇ ಇದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಲೋಕಸಭೆಯು ನಿವ್ವಳ 2.01 ಲಕ್ಷ ಕೋಟಿ ರೂ. ಎರಡನೇ ಪೂರಕ ಅನುದಾನ ಬೇಡಿಕೆಗೆ ಅನುಮೋದನೆ ನೀಡಿತು.
ಬಳಿಕ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

