ಕಾಸರಗೋಡು: ಕೇರಳ ರಾಜ್ಯ ಸೇವಾ ಪಿಂಚಣಿದಾರರ ಸಂಘಟನೆ(ಕೆಎಸ್‍ಎಸ್‍ಪಿಯು)34ನೇ ಕಾಸರಗೋಡು ಜಿಲ್ಲಾ ವಾರ್ಷಿಕ ಸಮ್ಮೇಳನ ಮಾ 28ರಂದು ಬೆಳಗ್ಗೆ 9.30ಕ್ಕೆ ಮಂಜೇಶ್ವರ ಹೊಸಂಗಡಿಯ ಗ್ರ್ಯಾಂಡ್ ಆಡಿಟೋರಿಯಂ ಕನ್ವೆನ್ಶನ್ ಸೆಂಟರ್‍ನಲ್ಲಿ ನಡೆಯಲಿದೆ. ಪಿಂಚಣಿದಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರದ ಜತೆಗೆ ಬಾಕಿ ಉಳಿಸಿಕೊಂಡಿರುವ ಭತ್ತೆಗಳನ್ನು ತಕ್ಷಣ ವಿತರಿಸುವಂತೆ ಸಮ್ಮೇಳನದಲ್ಲಿ ಆಗ್ರಹಿಸಲಾಗುವುದು ಎಂದು ಸಂಘಟನೆ ಕಾಸರಗೋಡು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ. ಕುಞಂಬು ನಾಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಂಘಟನೆ ರಾಜ್ಯ ಸಮಿತಿ ಅಧ್ಯಕ್ಷ ಎ.ಪಿ ಜೋಸ್ ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಸಮಿತಿ ಅಧ್ಯಕ್ಷಕೆ. ಜಯರಾಂಪ್ರಕಾಶ್ ಅಧ್ಯಕ್ಷತೆ ವಹಿಸುವರು. ರಾಜ್ಯ ಸಮಿತಿ ಸದಸ್ಯರಾದ ಪಿ.ಸಿ ಪ್ರಸನ್ನ, ಕೆ. ಸುಜಾತನ್, ಜಿಲ್ಲಾ ಸಮಿತಿ ಸದಸ್ಯ ವಿ. ಕೃಷ್ಣನ್, ಕೆ. ಮಾಧವನ್ ನಾಯರ್ ಉಪಸ್ಥಿತರಿರುವರು.
ಮಧ್ಯಾಃನ 12.30ರಿಂದ 2025-26ನೇ ಸಾಲಿನ ಜಿಲ್ಲಾ ಕೌನ್ಸಿಲ್ ಸಭೆ, 3.30ಕ್ಕೆ 2026-27ನೇ ಸಾಳಿನ ಜಿಲ್ಲಾ ಕೌನ್ಸಿಲ್ ಸಭೆ ನಡೆಯುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೆ.ಜಯರಾಂ ಪ್ರಕಾಶ್, ಎಸ್. ಗೋಪಾಲಕೃಷ್ಣನ್, ಯು. ರವಿಚಂದ್ರ, ಶೀನಪ್ಪ ಪೂಜಾರಿ ಅಲಾರ್, ಪಾರ್ವತೀ ಪಿ.ಆರ್ ಉಪಸ್ಥಿತರಿದ್ದರು.

