HEALTH TIPS

ಎಲ್‌ಪಿಜಿ ವ್ಯತ್ಯಯ: ತಾತ್ಕಾಲಿಕವಾಗಿ ಸೀಮೆಎಣ್ಣೆ ವಿತರಣೆಗೆ ಕೇಂದ್ರ ಅನುಮತಿ

 ನವದೆಹಲಿ: ಯುದ್ಧದ ಪರಿಣಾಮದಿಂದ ಎಲ್‌ಪಿಜಿ ಪೂರೈಕೆಯ ಬಿಕ್ಕಟ್ಟಿನ ನಡುವೆ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಸೀಮೆಎಣ್ಣೆಯನ್ನು ತಾತ್ಕಾಲಿಕವಾಗಿ ವಿತರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಪಶ್ಚಿಮ ಏಷ್ಯಾದಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿರುವ ಯುದ್ಧದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.


ವಿಶೇಷವಾಗಿ ಎಲ್‌ಪಿಜಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು, ದೇಶದಾದ್ಯಂತ ಅಡುಗೆ ಮತ್ತು ದೀಪಗಳಿಗಾಗಿ ಸೀಮೆಎಣ್ಣೆಯನ್ನು ತಾತ್ಕಾಲಿಕವಾಗಿ ಬಳಸಲು ಸರ್ಕಾರ ಅವಕಾಶ ನೀಡಿದೆ. ಇದರಲ್ಲಿ ಈ ಹಿಂದೆ ಸೀಮೆಎಣ್ಣೆ ಮುಕ್ತ ಎಂದು ವರ್ಗೀಕರಿಸಲಾದ ಪ್ರದೇಶಗಳು ಸೇರಿದಂತೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಮೆಎಣ್ಣೆಯನ್ನು ವಿತರಿಸಲು ಕೇಂದ್ರ ಸರ್ಕಾರ ಅನುಮತಿಸಿದೆ.

ಆಟೊ ಎಲ್‌ಪಿಜಿ ಕೊರತೆ ಇಲ್ಲ: ಸ್ಪಷ್ಟನೆಅಡುಗೆ ಅನಿಲ ಕೊರತೆ; ಬಾಗೇಪಲ್ಲಿಯಲ್ಲಿ ಹೋಟೆಲ್‌ ಬಂದ್

ಅಧಿಸೂಚನೆ ಪ್ರಕಾರ, ಪ್ರತಿ ಜಿಲ್ಲೆಗೆ ನಿಗದಿಪಡಿಸಿದ ಸಾರ್ವಜನಿಕ ವಲಯದ ಎರಡು ತೈಲ ಮಾರಾಟ ಕಂಪನಿಗಳು ಸುರಕ್ಷತಾ ನಿಯಮಗಳನ್ನು ಪಾಲಿಸಿಕೊಂಡು 5,000 ಲೀಟರ್ ಸೀಮೆಎಣ್ಣೆಯನ್ನು ಸಂಗ್ರಹಿಸಲು ಅನುಮತಿಸಲಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿದೆ.

ಸೀಮೆಎಣ್ಣೆ ವಿತರಣೆಗೆ ಅನುಮತಿ ನೀಡಿರುವ 21 ರಾಜ್ಯಗಳು

ದೆಹಲಿ

ಚಂಡೀಗಢ

ಹರಿಯಾಣ

ಪಂಜಾಬ್

ಉತ್ತರ ಪ್ರದೇಶ

ರಾಜಸ್ಥಾನ

ಗೋವಾ

ಮಧ್ಯಪ್ರದೇಶ

ಗುಜರಾತ್

ಮಹಾರಾಷ್ಟ್ರ

ಹಿಮಾಚಲ ಪ್ರದೇಶ

ಉತ್ತರಾಖಂಡ

ಜಮ್ಮು ಮತ್ತು ಕಾಶ್ಮೀರ

ಲಡಾಖ್

ಪುದುಚೇರಿ

ಆಂಧ್ರಪ್ರದೇಶ

ತೆಲಂಗಾಣ

ಕರ್ನಾಟಕ

ತಮಿಳುನಾಡು

ಕೇರಳ

ಕೇಂದ್ರಾಡಳಿತ ಪ್ರದೇಶಗಳು

21. ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries